ಬಿಹಾರ ಚುನಾವಣಾ ಫಲಿತಾಂಶ ತಂದ ತಳಮಳ: ಷೇರುಮಾರುಕಟ್ಟೆಯಲ್ಲಿ ಕುಸಿತ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭಾರಿ ಮುಖಭಂಗ ಅನುಭವಿಸಿದ ಬೆನ್ನಲ್ಲೇ ಅದರ ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಮೇಲೆ ಬೀರಿದ್ದು, 600 ಅಂಕಗಳಷ್ಟು ಕುಸಿತಕಂಡಿದೆ...
ಬಿಎಸ್ ಇ ಸೆನ್ಸೆಕ್ಸ್ (ಸಂಗ್ರಹ ಚಿತ್ರ)
ಬಿಎಸ್ ಇ ಸೆನ್ಸೆಕ್ಸ್ (ಸಂಗ್ರಹ ಚಿತ್ರ)
Updated on: 

ಮುಂಬೈ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭಾರಿ ಮುಖಭಂಗ ಅನುಭವಿಸಿದ ಬೆನ್ನಲ್ಲೇ ಅದರ ಪರಿಣಾಮ ಭಾರತೀಯ  ಷೇರುಮಾರುಕಟ್ಟೆ ಮೇಲೆ ಬೀರಿದ್ದು, 600 ಅಂಕಗಳಷ್ಟು ಕುಸಿತಕಂಡಿದೆ.

ಇಂದು ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಬಿಎಸ್ಇ ಸೆನ್ಸೆಕ್ಸ್ ಪತನದತ್ತ ಮುಖಮಾಡಿತು. ದಿನದ ಆರಂಭದಲ್ಲೇ ಬಿಎನ್‌ಎಸ್‌ ಸುಮಾರು 470 ಅಂಕಗಳ ಕುಸಿತ ದಾಖಲಿಸಿ  ತನ್ನ ವಹಿವಾಟು ಆರಂಭಿಸಿದ್ದು, ಹೂಡಿಕೆದಾರರಲ್ಲಿ ಆಂತಕ ಮೂಡಿಸಿತು. ಪರಿಣಾಮ 11 ಗಂಟೆಯ ವೇಳೆಗೇ ಭಾರತೀಯ ಷೇರುಮಾರುಕಟ್ಟೆ 600 ಅಂಕಗಳಷ್ಟು ಕುಸಿತ ಕಂಡಿದೆ. ಆ  ಮೂಲಕ 26, 000 ಅಂಕಗಳಿಗೆ ಸ್ಥಿರವಾಗಿದೆ.

ನಿಫ್ಟಿ ಕೂಡ ಕುಸಿತಕಂಡಿದ್ದು, 50 ಅಂಕಗಳಷ್ಟು ಪತನಗೊಳ್ಳುವ ಮೂಲಕ 7, 800ಕ್ಕೆ ಸ್ಥಿರವಾಗಿದೆ. ಇದೇ ವೇಳೆ ರುಪಾಯಿ ಮೌಲ್ಯದಲ್ಲಿಯೂ ಕೂಡ ಅಲ್ಪ ಕಡಿತ ಕಂಡಬಂದಿದ್ದು, 66.50ಕ್ಕೆ ರುಪಾಯಿ ಮೌಲ್ಯ ಕಡಿತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com