ದುಬೈ: ಕೊಲ್ಲಿ ಪ್ರದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದವರು ಸುಲಭವಾಗಿ ನಗದು ಜಮಾ ಮಾಡುವುದಕ್ಕೆ ಅನುಕೂಲವಾಗಲೆಂದು ಎಮಿರೇಟ್ಸ್ ಬ್ಯಾಂಕ್ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಪರಸ್ಪರ ಮೈತ್ರಿ ಮಾಡಿಕೊಂಡಿವೆ.
ಈ ಮೈತ್ರಿಯಿಂದ ಎರಡೂ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿರುವ ಎನ್‍ಆರ್‍ಐಗಳು ಶೀಘ್ರದಲ್ಲಿ ಮತ್ತು ಸುಲಭವಾಗಿ ನಗದು ಜಮಾ ಮಾಡಬಹುದು.
ಎನ್ ಆರ್‍ಐಗಳು ತಮ್ಮ ದೇಶಕ್ಕೆ ಹಣ ಕಳಿಸುವ ಅನುಕೂಲಕ್ಕೆಂದು ಎಮಿರೇಟ್ಸ್ ಬ್ಯಾಂಕ್ ಡೈರೆಕ್ಟ್ ರೆಮಿಟ್ ವ್ಯವಸ್ಥೆ ರೂಪಿಸಿದೆ. ಈಗ ಎಸ್‍ಬಿಐ ಜೊತೆ ಮೈತ್ರಿಯಿಂದ ಈ ವ್ಯವಸ್ಥೆ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ಎಮಿರೇಟ್ಸ್ ಬ್ಯಾಂಕ್ ಹೇಳಿದೆ.