ಹಣದುಬ್ಬರ ಸತತ ಏರುಮುಖ

ಹಣದುಬ್ಬರ ಪ್ರಮಾಣ ನಿರಂತರವಾಗಿ ಏರಿಕೆ ಕಾಣುತ್ತಿದೆ. ಬೇಳೆ ಕಾಳು ಮತ್ತು ಆಹಾರ ಉತ್ಪನ್ನಗಳ ದರಗಳ ಗಣನೀಯವಾಗಿ ಏರಿಕೆ ಕಂಡಿದ್ದರಿಂದ...
ಹಣದುಬ್ಬರ
ಹಣದುಬ್ಬರ
Updated on: 
ನವದೆಹಲಿ: ಹಣದುಬ್ಬರ ಪ್ರಮಾಣ ನಿರಂತರವಾಗಿ ಏರಿಕೆ ಕಾಣುತ್ತಿದೆ. ಬೇಳೆ ಕಾಳು ಮತ್ತು ಆಹಾರ ಉತ್ಪನ್ನಗಳ ದರಗಳ ಗಣನೀಯವಾಗಿ ಏರಿಕೆ ಕಂಡಿದ್ದರಿಂದ ಅಕ್ಟೋಬರ್ ನಲ್ಲಿ ರಿಟೇಲ್ ದರ ಆಧರಿತ ಹಣದುಬ್ಬರ ಪ್ರಮಾಣ ಶೇ.5ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಸತತ ಮೂರನೆ ತಿಂಗಳು ಏರಿಕೆ ದಾಖಲಿಸಿದೆ. 
ಕಳೆದ ಸೆಪ್ಟೆಂಬರ್‍ನಲ್ಲಿ ಈ ರಿಟೇಲ್ ದರ ಆಧರಿತ ಹಣದುಬ್ಬರ ಪ್ರಮಾಣ ಶೇ.4.41ರಷ್ಟಿದ್ದರೆ, ಕಳೆದ ವರ್ಷದ ಅಕ್ಟೋಬರ್‍ನಲ್ಲಿ ಈ ಪ್ರಮಾಣ ಶೇ.4.62ರಷ್ಟಿತ್ತು. ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ ಆಹಾರ ಹಣದುಬ್ಬರ ಪ್ರಮಾಣ ಶೇ.5.25ಕ್ಕೆ ತಲುಪಿದೆ. ಅಕ್ಟೋಬರ್ ತಿಂಗಳಲ್ಲಿ ಬೇಳೆ ಕಾಳು ಮತ್ತು ಇತರೆ ಧಾನ್ಯಗಳ ಹಣದುಬ್ಬರ ಪ್ರಮಾಣ 42.20ಕ್ಕೆ ಏರಿದೆ. 
ಆಹಾರ ಮತ್ತು ಪಾನೀಯಗಳ ಹಣದುಬ್ಬರ ಪ್ರಮಾಣ ಶೇ.5.34ಕ್ಕೆ ಹೆಚ್ಚಿದೆ. ತರಕಾರಿ ಮತ್ತು ಹಣ್ಣುಗಳ ಹಣದುಬ್ಬರ ಪ್ರಮಾಣ ಕ್ರಮವಾಗಿ ಶೇ.2.42 ಮತ್ತು ಶೇ.1.98ರಷ್ಟಿದೆ. ಹಾಗಿದ್ದರೂ ಮಾಂಸ, ಮೀನು ದರಗಳು ಇಳಿಮುಖ ಕಂಡಿವೆ. ಅಕ್ಟೋಬರ್ ತಿಂಗಳಲ್ಲಿ ಮೊಟ್ಟೆ ದರದಲ್ಲೂ ಇಳಿಮುಖ ಕಂಡುಬಂದಿತ್ತು. 
ಕೇಂದ್ರ ಅಂಕಿಅಂಶ ಮತ್ತು ಯೋಜನೆ ಜಾರಿ ಸಚಿವಾಲಯ ಗುರುವಾರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಸಕ್ಕರೆ ಮತ್ತು ಸಂಬಂಧಪಟ್ಟ ಉತ್ಪನ್ನಗಳ ಹಣದುಬ್ಬರ ಪ್ರಮಾಣ 10.47ರಷ್ಟಿದ್ದು ನೆಗೆಟಿವ್ ವಲಯದಲ್ಲೇ ಮುಂದುವರೆದಿದೆ. ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರ ಪ್ರಮಾಣ ಶೇ.5.54ಕ್ಕೆ ಏರಿಕೆ ಕಂಡಿದ್ದರೆ ನಗರ ಪ್ರದೇಶದಲ್ಲಿ ಈ ಪ್ರಮಾಣ ಶೇ.4.28ರಷ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com