ನವದೆಹಲಿ: ಮಹಾರಾಷ್ಟ್ರದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿರುವುದರಿಂದ ಈ ವರ್ಷವೂ ಅಂದಾಜಿಗೂ ಮೀರಿ ಸಕ್ಕರೆ ಉತ್ಪಾದನೆ ಹೆಚ್ಚಾಗಲಿದೆ.
ಪ್ರಸಕ್ತ ಮಾರುಕಟ್ಟೆ ವರ್ಷದ ನವೆಂಬರ್ 15ರವರೆಗೂ 7.61 ಲಕ್ಷ ಟನ್ ಉತ್ಪಾದನೆಯಾಗಿದ್ದು ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.33ರಷ್ಟು ಏರಿಕೆ ಕಂಡಿದೆ. ಕಳೆದ ಮಾರ್ಕೆಟಿಂಗ್ ವರ್ಷದಲ್ಲಿ ಇದುವರೆಗೂ 5.74 ಲಕ್ಷ ಟನ್ ಉತ್ಪಾದನೆಯಾಗಿತ್ತು.
ಕಳೆದ ತಿಂಗಳು ಕಂಪನಿಗಳು 80 ಸಾವಿರ ಟನ್ ರಫ್ತು ಮಾಡಿದ್ದು ಈ ತಿಂಗಳಲ್ಲಿ 2 ರಿಂದ 3 ಲಕ್ಷ ಟನ್ ರಫ್ತು ಆರ್ಡರ್‍ಗಳನ್ನು ಪಡೆದಿವೆ. 2015-16ನೇ ಸಾಲಿಗೆ ಕಬ್ಬು ನುರಿಯುವಿಕೆ ಅಕ್ಟೋಬರ್‍ನಲ್ಲಿ ಆರಂಭವಾಗಿದೆ ಎಂದು ಭಾರತೀಯ ಸಕ್ಕರೆ ಮಿಲ್‍ಗಳ ಒಕ್ಕೂಟ (ಐಎಸ್‍ಎಂಎ) ಹೇಳಿದೆ.
ಕಳೆದ ವರ್ಷ ನವೆಂಬರ್‍ವರೆಗೆ 155 ಮಿಲ್‍ಗಳು ನುರಿದಿದ್ದರೆ, ಈ ವರ್ಷ 175 ಕಾರ್ಖಾನೆಗಳು ನುರಿಯುವಿಕೆ ಆರಂಭಿಸಿವೆ.