ಬ್ಯಾಂಕ್‍ಗಳಿಗೆ 5 ದಿನ ಸರಣಿ ರಜೆ

ಒಂದು ವಾರದ ಖರ್ಚಿಗಾಗುವಷ್ಟು ಹಣ ವನ್ನು ನೀವು ಮಂಗಳವಾರವೇ ಡ್ರಾ ಮಾಡಿಟ್ಟುಕೊಳ್ಳುವು ದು ಒಳಿತು. ಯಾಕೆಂದರೆ ಬ್ಯಾಂಕ್‍ಗಳು ಐದು ದಿನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ:  ಒಂದು ವಾರದ ಖರ್ಚಿಗಾಗುವಷ್ಟು ಹಣ ವನ್ನು ನೀವು ಮಂಗಳವಾರವೇ ಡ್ರಾ ಮಾಡಿಟ್ಟುಕೊಳ್ಳುವು ದು ಒಳಿತು. ಯಾಕೆಂದರೆ ಬ್ಯಾಂಕ್‍ಗಳು ಐದು ದಿನ ರಜೆ ಮಾಡುತ್ತಿವೆ. ಈ ವಾರ ಹಬ್ಬಗಳ ಹಿನ್ನೆಲೆಯಲ್ಲಿ ಐದು ದಿನಗಳ ಸರಣಿ ರಜೆ ಬ್ಯಾಂಕ್‍ಗಳಿಗೆ ಮತ್ತು ಸರ್ಕಾರಿ ಕಚೇರಿಗಳಿಗೆ ದೊರೆತಿದೆ. ರಜೆ ಅ.21ರಿಂದ ಆರಂಭವಾಗುತ್ತದೆ. 21ರಂದು ದುರ್ಗಾ ಪೂಜೆ, 22ರಂದು ದಸರಾ,23ರಂದು ಮೊಹರಮ್ , 24ರಂದು ನಾಲ್ಕನೇ ಶನಿವಾರ, 25ರಂದು ಭಾನುವಾರ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಬ್ಯಾಂಕ್‍ಗಳಿಗೆ ರಜಾದಿನ ಗಳಾಗಿವೆ.ಇದು ಮಧ್ಯದಲ್ಲಿ ಬರುವು ದರಿಂದ ಖಾಸಗಿ ಬ್ಯಾಂಕ್ ಸಿಬ್ಬಂದಿಯೂ ರಜೆ ಆಚರಿಸುವುದು ನಿಶ್ಚಿತ. ಈ ಸಾಲು ರಜೆಗಳ ಕಾರಣ ಬ್ಯಾಂಕಿಂಗ್ ವಹಿವಾಟು ಮಂದಗತಿಯಲ್ಲಿರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com