

ನವದೆಹಲಿ: ಸತತ ಮೂರನೆ ದಿನ ಮಂಗಳವಾರವೂ ಚಿನ್ನ ಮತ್ತು ಬೆಳ್ಳಿ ದರಗಳು ಏರಿಕೆ ದಾಖಲಿಸಿವೆ. ಇಲ್ಲಿನ ಚಿನಿವಾರ ಪೇಟೆಯಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ದರ ರು.200 ಏರಿಕೆ ಕಂಡು ರು.27,000 ಮಟ್ಟವನ್ನು ಮತ್ತೆ ಗಳಿಸಿತು.
ಬೆಳ್ಳಿ ಸಹ ಪ್ರತಿ ಕೆಜಿ ದರ ರು.150 ಏರಿಕೆಯೊಂದಿಗೆ ರು.35,150ಕ್ಕೆ ತಲುಪಿತು. ಮದುವೆ ಮತ್ತು ಹಬ್ಬದ ಸೀಸನ್ಗಾಗಿ ರಿಟೇಲ್ ಮತ್ತು ಆಭರಣ ತಯಾರಕರು ಹೆಚ್ಚು ಚಿನ್ನದ ಖರೀದಿಯಲ್ಲಿ ತೊಡಗಿದ್ದರು. ಕೈಗಾರಿಕೆ ಮತ್ತು ನಾಣ್ಯ ತಯಾರಕರು ಬೆಳ್ಳಿಯನ್ನು ಹೆಚ್ಚು ಖರೀದಿಸಿದರು. ಸಿಂಗಾಪುರ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ದರ ಶೇ.0.7ರಷ್ಟು ಏರಿದೆ.