

ನವದೆಹಲಿ: ಹಣದುಬ್ಬರ ಇಳಿಮುಖ ಕಂಡಿರು ವುದರಿಂದ ಆರ್‍ಬಿಐ ಪ್ರಮುಖ ಸಾಲಗಳ ಮೇಲಿನ ಬಡ್ಡಿದರಗಳನ್ನು ಕಡಿತ ಗೊಳಿಸಲಿದೆ ಎಂಬ ನಿರೀಕ್ಷೆಗಳಿದ್ದರೂ ಷೇರು ಮಾರುಕಟ್ಟೆ ಸೂಚ್ಯಂಕಗಳು ಮಂಗಳವಾರದ ವಹಿವಾಟಿನಲ್ಲಿ ಕುಸಿತ ಕಂಡಿವೆ.
ಸೆನ್ಸೆಕ್ಸ್ 150.77 ಅಂಕ ನಷ್ಟದೊಂದಿಗೆ 25,705.93ಕ್ಕೆ ತಲುಪಿದರೆ ನಿಪಿs್ಟ 43.15 ಅಂಕ ನಷ್ಟದೊಂದಿಗೆ 7,829.10ಕ್ಕೆ ಮುಟ್ಟಿದೆ. ಚೀನಾದ ಶಾಂಘೈ ಸೂಚ್ಯಂಕ ಸೇರಿದಂತೆ ಏಷ್ಯಾದ ಬಹುತೇಕ ಮಾರುಕಟ್ಟೆಗಳು ಇಳಿಮುಖ ಕಂಡಿದ್ದರಿಂದ ದೇಶೀಯ ಪೇಟೆಯೂ ನಷ್ಟದೊಂದಿಗೆ ಅಂತ್ಯ ಕಂಡವು ಎಂದು ಮಾರುಕಟ್ಟೆ ದಲ್ಲಾಳಿಗಳು ಹೇಳಿದ್ದಾರೆ.
ಸೆನ್ಸೆಕ್ಸ್ ಗುಂಪಿನ ವಲಯವಾರು ಸೂಚ್ಯಂಕಗಳಲ್ಲಿ ಉಕ್ಕು ಸೂಚ್ಯಂಕ ಅತಿ ಹೆಚ್ಚು ಶೇ.5.08ರಷ್ಟು ನಷ್ಟ ಕಂಡಿತು.