ನವದೆಹಲಿ: ಹಳೇಯ 500 ಮುಖಬೆಲೆಯ ನೋಟುಗಳನ್ನು ನಾಳೆಯವರೆಗೆ (ಡಿಸೆಂಬರ್ 15) ಮಾತ್ರ ಔಷಧ ಅಂಗಡಿಗಳಲ್ಲಿ ಮತ್ತು ಸಾರ್ವಜನಿಕ ಸೇವೆಗಳ ಪಾವತಿ ಕೇಂದ್ರಗಳಲ್ಲಿ ಸ್ವೀಕರಿಸಲಾಗುತ್ತದೆ ಎಂದು ಹಣಕಾಸು ಸಚಿವಾಲಯ ನಾಗರಿಕರಿಗೆ ಜ್ಞಾಪನೆ ಮಾಡಿದೆ.
ಡಿಸೆಂಬರ್ 15ರ ನಂತರ ನಿಮ್ಮ ಬಳಿ ಇರುವ ಹಳೇಯ 500 ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ನಿಮ್ಮ ಖಾತೆಗೆ ಜಮಾ ಮಾಡಿಕೊಳ್ಳಬಹುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.