ಟಾಟಾ ಟೆಲಿಸರ್ವೀಸಸ್ ನಿರ್ದೇಶಕ ಹಾಗೂ ಅಧ್ಯಕ್ಷ ಸ್ಥಾನದಿಂದ ಸರ್ವಾನುಮತದಿಂದ ಸೈರಸ್ ಮಿಸ್ತ್ರಿ ವಜಾ

ಟಾಟಾ ಟೆಲಿಸರ್ವೀಸಸ್ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನ ವಜಾಗೊಳಿಸಲಾಗಿದೆ ಎಂದು ಟಾಟಾ ಟೆಲಿ ಸರ್ವೀಸಸ್...
ಸೈರಸ್ ಮಿಸ್ತ್ರಿ
ಸೈರಸ್ ಮಿಸ್ತ್ರಿ

ಮುಂಬಯಿ: ಟಾಟಾ ಟೆಲಿಸರ್ವೀಸಸ್ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನ ವಜಾಗೊಳಿಸಲಾಗಿದೆ ಎಂದು ಟಾಟಾ ಟೆಲಿ ಸರ್ವೀಸಸ್ ತಿಳಿಸಿದೆ.

ಸೈರಸ್ ಮಿಸ್ತ್ರಿ ವಜಾಕ್ಕಾಗಿ ಟಾಟಾ ಟೆಲಿಸರ್ವೀಸಸ್ ನ ಎಲ್ಲಾ ಷೇರುದಾರರು ಸರ್ವಾನುಮತದಿಂದ ನಿರ್ಣಯ ಪಾಸು ಮಾಡಿದ್ದಾರೆ. ಟಾಟಾ ಇಂಡಸ್ಟ್ರೀಸ್ ಮತ್ತು ಟಿಸಿಎಸ್ ನಂತರ ಸೈರಸ್ ಮಿಸ್ತ್ರಿಯನ್ನು ಟಾಟಾ ಟೆಲಿಸರ್ವೀಸ್ ನ ಹುದ್ದೆಗಳಿಂದ ವಜಾಗೊಳಿಸಲಾಗಿದೆ.

ಇಂದು ಟಾಟಾ ಟೆಲಿ ಸರ್ವೀಸ್ ನ ನ ಇಕ್ವಿಟಿ ಶೇರ್ ಹೋಲ್ಡರ್ಸ್ ಗಳಿಗಾಗಿ ಕರೆದಿದ್ದ ಅಸಾಧಾರಣ ಸಾಮಾನ್ಯ ಸಭೆಯಲ್ಲಿ ಮಿಸ್ತ್ರಿ ವಜಾಕ್ಕಾಗಿ ಸಾಮಾನ್ಯ ಕೂಡಲೇ ಜಾರಿಗೆ ಬರುವಂತೆ ನಿರ್ಣಯ ಪಾಸು ಮಾಡಲಾಯಿತು ಎಂದು ಟಾಟಾ ಟೆಲಿ ಸರ್ವೀಸಸ್ ತಿಳಿಸಿದೆ.

ನಿನ್ನೆಯಷ್ಟೇ ಇಜಿಎಂ ಮೀಟಿಂಗ್ ನಲ್ಲಿ ಸೈರಸ್ ಮಿಸ್ತ್ರಿ ಅವರನ್ನು  ಟಾಟಾ ಗ್ರೂಪ್ ನ ಕ್ರೌನ್ ಜ್ಯುವೆಲ್ಲರ್ಸ್, ಟಿಸಿಎಸ್ ನ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲು ಮತ ಚಲಾಯಿಸಿ ಅವರನ್ನು ಹುದ್ದೆಗಳಿಂದ ವಜಾಗೊಳಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com