ಮತ್ತೆ 200 ಅಂಕ ಕುಸಿತ ಕಂಡ ಸೆನ್ಸೆಕ್ಸ್

ಭಾರತೀಯ ಷೇರುಮಾರುಕಟ್ಟೆ ಮತ್ತೆ ಕುಸಿತ ಕಂಡಿದ್ದು, ಶುಕ್ರವಾರದ ಆರಂಭಿಕ ವಾಹಿವಾಟಿನಲ್ಲಿಯೇ ಬರೋಬ್ಬರಿ 200 ಅಂಕಗಳ ಕುಸಿತದೊಂದಿಗೆ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ...
ಸೆನ್ಸೆಕ್ಸ್ (ಸಂಗ್ರಹ ಚಿತ್ರ)
ಸೆನ್ಸೆಕ್ಸ್ (ಸಂಗ್ರಹ ಚಿತ್ರ)
Updated on: 

ಮುಂಬೈ: ಭಾರತೀಯ ಷೇರುಮಾರುಕಟ್ಟೆ ಮತ್ತೆ ಕುಸಿತ ಕಂಡಿದ್ದು, ಶುಕ್ರವಾರದ ಆರಂಭಿಕ ವಾಹಿವಾಟಿನಲ್ಲಿಯೇ ಬರೋಬ್ಬರಿ 200 ಅಂಕಗಳ ಕುಸಿತದೊಂದಿಗೆ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

ನಿನ್ನೆಯ ವಹಿವಾಟಿನ ಭಾರಿ ಕುಸಿತದಿಂದಾಗಿ ಆತಂಕಗೊಂಡಿರುವ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಗಿಬಿದ್ದಿರುವ ಹಿನ್ನಲೆಯಲ್ಲಿ ಶುಕ್ರವಾರವೂ ಭಾರತೀಯ ಷೇರುಮಾರುಕಟ್ಟೆ ಕುಸಿತ ದಾಖಲಿಸಿದೆ.  ಇಂದು ಬೆಳಗ್ಗೆ ವಹಿವಾಟು ಆರಂಭವಾದಗುತ್ತಿದ್ದಂತೆಯೇ ಕುಸಿತ ಆರಂಭಗೊಂಡಿದ್ದು, ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ ಒಟ್ಟು 200 ಅಂಕಗಳನ್ನು ಕಳೆದುಕೊಂಡಿದೆ. ಪ್ರಸ್ತುತ ಸೆನ್ಸೆಕ್ಸ್ 22,734.11 ಅಂಕಗಳಿಗೆ  ಸ್ಥಿರಗೊಂಡಿದ್ದು, ನಿಫ್ಟಿ ಕೂಡ 6,908 ಅಂಕಗಳಿಗೆ ಸ್ಥಿರವಾಗಿದೆ.

ಪ್ರಮುಖವಾಗಿ ಜಸ್ಟ್ ಡಯಲ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಶೇ.20.8ರಷ್ಟು ಕುಸಿತಗೊಂಡಿದ್ದು, 377.65ಕ್ಕೆ ಕುಸಿದಿದೆ. ಬ್ಯಾಂಕಿಗ್ ಕ್ಷೇತ್ರದಲ್ಲಿಯೂ ನಿಫ್ಟಿ ಶೇ.1 ರಷ್ಟು ಕುಸಿದಿದ್ದು, ಪಂಜಾಬ್ ನ್ಯಾಷನಲ್  ಬ್ಯಾಂಕ್ ಗೆ ಹೆಚ್ಚು ನಷ್ಟವಾಗಿದೆ ಎಂದು ತಿಳಿದುಬಂದಿದೆ. ಪಿಎನ್ ಬಿಯ ಷೇರುಗಳ ಮೌಲ್ಯದಲ್ಲಿ ಶೇ.4.6ರಷ್ಟು ಕುಸಿದಿದ್ದು, 73.50 ರು.ಗೆ ಇಳಿಕೆಯಾಗಿದೆ. ಉಳಿದಂತೆ ಕೆನರಾ ಬ್ಯಾಂಕ್, ಐಸಿಐಸಿ ಬ್ಯಾಂಕ್,  ಬ್ಯಾಂಕ್ ಆಫ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಪ್ರಮುಖ ರಾಷ್ಟ್ರೀಯ ಬ್ಯಾಂಕುಗಳ ಷೇರುಮೌಲ್ಯ ಕೂಡ ಕುಸಿತಕಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com