

ಮುಂಬೈ: ಭಾರತೀಯ ಷೇರುಮಾರುಕಟ್ಟೆ ಮತ್ತೆ ಚೇತರಿಸಿಕೊಂಡಿದ್ದು, ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 70 ಅಂಕಗಳ ಏರಿಕೆ ಕಂಡಿದೆ.
ಪ್ರಮುಖವಾಗಿ ಶೈಕ್ಷಣಿಕ ಕ್ಷೇತ್ರದ ಷೇರುಗಳ ಮೌಲ್ಯ ಹೆಚ್ಚಾಗಿದ್ದು, ಸೆನ್ಸೆಕ್ಸ್ ಶೇ.0.31ರಷ್ಟು ಏರಿಕೆ ಕಂಡಿದೆ. ಪ್ರಸ್ತುತ ಸೆನ್ಸೆಕ್ಸ್ 23,722.13 ಅಂಕಗಳಿಗೆ ಸ್ಥಿರವಾಗಿದೆ. ಇನ್ನು ನಿಫ್ಟಿ ಕೂಡ 17.40 ಅಂಕಗಳ ಅಲ್ಪ ಏರಿಕೆಯೊಂದಿಗೆ 7,209.15 ಅಂಕಗಳಿಗೆ ಸ್ಥಿರವಾಗಿದೆ. ವಾರದ ಆರಂಭದ ವಹಿವಾಟಿನಿಂದಲೂ ಭಾರತೀಯ ಷೇರುಮಾರುಕಟ್ಟೆ ಏರಿಕೆಯತ್ತ ಮುಖ ಮಾಡಿತ್ತು. ಇಂದಿನ 70 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ ನಾಲ್ಕು ವಾರಗಳ ಅಧಿಕ ಮಟ್ಟಕ್ಕೆ ತಲುಪಿದೆ.
ಪ್ರಮುಖವಾಗಿ ಶೈಕ್ಷಣಿಕ ಕ್ಷೇತ್ರದ ಷೇರುಮೌಲ್ಯ ಹೆಚ್ಚಾಗಿದ್ದು, ಎಜುಕಾಂಪ್ ಸೊಲ್ಯೂಷನ್ ಲಿಮಿಟೆಡ್ ಸಂಸ್ಥೆ ಷೇರು ಮೌಲ್ಯ ಶೇ. 6 ರಷ್ಟು ಏರಿಕೆಯೊಂದಿಗೆ ರು.12.73ಕ್ಕೇರಿದೆ. ಕರಿಯರ್ ಪಾಯಿಂಟ್ ಲಿಮಿಟೆಡ್ ಸಂಸ್ಥೆಯ ಷೇರು ಮೌಲ್ಯ ಶೇ.3 ರಷ್ಟು ಏರಿಕೆಯೊಂದಿಗೆ ರು.103ಕ್ಕೇರಿದ್ದು, ಎವರಾನ್ನ್ ಎಜುಕೇಷನ್ ಲಿಮಿಟೆಡ್ ನ ಷೇರುಗಳು ಶೇ.4.4 ಮತ್ತು ಟ್ರೀ ಹೌಸ್ ಎಜುಕೇಷನ್ ಅಂಡ್ ಆಕ್ಸೆಸರೀಸ್ ಲಿಮಿಟೆಡ್ ಸಂಸ್ಥೆಯ ಷೇರು ಮೌಲ್ಯ ಶೇ.10 ರಷ್ಟು ಏರಿಕೆ ಕಂಡಿದೆ.