2022 ವೇಳೆಗೆ ಬಡವರಿಗಾಗಿ 5 ಕೋಟಿ ಮನೆ ನಿರ್ಮಾಣ: ಪ್ರಧಾನಿ ಮೋದಿ

ರಾಯ್ ಪುರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಶಿಲಾನ್ಯಾಸ ಮಾಡಿರುವ ಪ್ರಧಾನಿ ನರೇಂದ್ರ ಮೋದಿ 2022 ವೇಳೆಗೆ ಬಡವರಿಗಾಗಿ 5 ಕೋಟಿ ಮನೆ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ
Updated on

ರಾಯ್ ಪುರ: ರಾಯ್ ಪುರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಶಿಲಾನ್ಯಾಸ ಮಾಡಿರುವ ಪ್ರಧಾನಿ ನರೇಂದ್ರ ಮೋದಿ 2022 ವೇಳೆಗೆ ಬಡವರಿಗಾಗಿ 5 ಕೋಟಿ ಮನೆ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ 5 ಕೋಟಿ ಕುಟುಂಬಗಳಿಗೆ ಮನೆ ಇಲ್ಲದಂತಾಗಿದೆ. ಈ ಪೈಕಿ 2 ಕೋಟಿಯಷ್ಟು ಜನರು ನಗರ ಪ್ರದೇಶದಲಿದ್ದರೆ 3 ಕೋಟಿಯಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಭಾರತ ತನ್ನ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಬೇಕಾದರೆ ಎಂತಹ ಭಾರತವನ್ನು ಕಾಣಲು ಸಿದ್ಧವಾಗಬೇಕು ಎಂಬುದರ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಚಿಂತನೆ ನಡೆಸಬೇಕು ಎಂದು ಪ್ರಧಾನಿ ಹೇಳಿದ್ದಾರೆ.
ದೇಶದ ಯುಕರು ಉದ್ಯೋಗ ಹುಡುಕುವುದರ ಬದಲು ಉದ್ಯೋಗಗಳನ್ನು ಸೃಷ್ಟಿಸುವಂತಾಗಬೇಕು, ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಸೌಕರ್ಯ ಯೋಜನೆಯಲ್ಲ, ಇದು ದೇಶದ ಬಡವರ ಅಭಿವೃದ್ಧಿಗಾಗಿ ಕೈಗೊಳ್ಳಲಾಗಿರುವ ಯೋಜನೆ ಎಂದು ಮೋದಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com