ವಾಣಿಜ್ಯ

ವೇದಾಂತ ಗ್ರೂಪ್‌ಗೆ ದೇಶದ ಮೊದಲ ಚಿನ್ನದ ಗಣಿ ಗುತ್ತಿಗೆ

ವೇದಾಂತ ಗ್ರೂಪ್‌ಗೆ ದೇಶದ ಮೊದಲ ಚಿನ್ನದ ಗಣಿ ಗುತ್ತಿಗೆ
ವೇದಾಂತ ಗಣಿ ಕಂಪನಿ (ಸಂಗ್ರಹ ಚಿತ್ರ)
Published On :

ನವದೆಹಲಿ: ದೇಶದ ಮೊದಲ ಚಿನ್ನದ ಗಣಿ ಗುತ್ತಿಗೆ ಹಕ್ಕನ್ನು ಖ್ಯಾತ ಗಣಿ ಕಂಪನಿ ವೇದಾಂತ ಸಂಸ್ಥೆ ಪಡೆದುಕೊಂಡಿದೆ.

ಛತ್ತೀಸ್‌ಗಢದಲ್ಲಿ ನಡೆದ ದೇಶದ ಮೊದಲ ಚಿನ್ನದ ಗಣಿ ಹರಾಜು ಪ್ರಕ್ರಿಯೆಯಲ್ಲಿ ವೇದಾಂತ ಸಮೂಹ ಸಂಸ್ಥೆ ಗಣಿ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ ನಡೆದ ಸೋನಖಮ್‌ನ  ಬಘ್ಮಾರ ಚಿನ್ನದ ಗಣಿ ಹರಾಜಿನಲ್ಲಿ ಇತರ ಮೂರು ಸಂಸ್ಥೆಗಳಿಗಿಂತ ವೇದಾಂತ ಗ್ರೂಪ್ ಹೆಚ್ಚಿನ ಬಿಡ್ಡಿಂಗ್ ಮಾಡಿದ ಪರಿಣಾಮ ಆ ಸಂಸ್ಥೆಗೆ ಗುತ್ತಿಗೆ ಪರವಾನಗಿ ದೊರೆತಿದೆ. ಈ ಗಣಿ  ಹರಾಜಿನಿಂದಾಗಿ ಕೇಂದ್ರ ಸರ್ಕಾರಕ್ಕೆ 24.7 ಕೋಟಿ ರೂ. ರಾಯಧನವಷ್ಟೇ ಅಲ್ಲದೆ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿಯಾಗಿ 81.4 ಕೋಟಿ ರೂ. ಆದಾಯ ದೊರೆಯುವ ನಿರೀಕ್ಷೆ ಇದೆ.

ಈ ಬಗ್ಗೆ ಮಾಹಿತಿ ನೀಡಿದ ಛತ್ತೀಸ್ ಗಢ ಸಿಎಂ ರಮಣ್ ಸಿಂಗ್ ಅವರು, ಕಬ್ಬಿಣ, ಕಲ್ಲಿದ್ದಲು ಸೇರಿ ರಾಜ್ಯದಲ್ಲಿ ಅಪಾರ ಪ್ರಮಾಣದ ಖನಿಜ ಸಂಪತ್ತಿದ್ದರೂ ಚಿನ್ನದ ಗಣಿ ಗುತ್ತಿಗೆಯನ್ನು  ವಾಣಿಜ್ಯೀಕರಣಗೊಳಿಸಿರುವುದು ಕೈಗಾರಿಕೆಗಳನ್ನು ರಾಜ್ಯಕ್ಕೆ ಸೆಳೆಯಲು ಸಹಾಯಕವಾಗಲಿದೆ. ಉದ್ಯಮಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಿಯಮಗಳನ್ನು ಸರಳೀಕರಿಸಿ ಹೆಚ್ಚಿನ ಆದಾಯ  ಗಳಿಸಲು ಹಾಗೂ ಉದ್ಯೋಗ ಸೃಷ್ಟಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಅಲ್ಲದೆ, ಈ ಚಿನ್ನದ ಗಣಿ ಗುತ್ತಿಗೆಯಿಂದಾಗಿ ದೇಶದಲ್ಲಿ ಬಂಗಾರದ ಆಮದು ಪ್ರಮಾಣ ತಗ್ಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  2015ರಲ್ಲಿ ಗಣಿ ಮತ್ತು ಖನಿಜ ಕಾಯ್ದೆಗೆ ತಿದ್ದುಪಡಿ  ತಂದುಖಾಸಗಿ ಸಂಸ್ಥೆಗಳಿಗೆ ಚಿನ್ನದ ಗಣಿ ಗುತ್ತಿಗೆ ನೀಡಲು ಅವಕಾಶ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.