ಝೂಂಕಾರ್ ವಿಸ್ತರಣೆ

ಝೂಂಕಾರ್ ತನ್ನ ಸೇವೆಯನ್ನು ಇನ್ನು 18 ತಿಂಗಳಲ್ಲಿ 13 ನಗರಗಳಿಗೆ ವಿಸ್ತರಿಸುವ ಗುರಿ ಹೊಂದಿದ್ದು, ಇನ್ನೂ 1,300 ಕಾರುಗಳನ್ನು ಖರೀದಿಸಲಾಗುವುದು ಎಂದು ಕಂಪನಿ ಸಹ ಸಂಸ್ಥಾಪಕ ಗ್ರೆಗ್ ಮೊರನ್ ತಿಳಿಸಿದ್ದಾರೆ...
ಝೂಂಕಾರ್ ಸಂಸ್ಥಾಪಕ ಗ್ರೆಗ್ ಮೊರನ್ (ಸಂಗ್ರಹ ಚಿತ್ರ)
ಝೂಂಕಾರ್ ಸಂಸ್ಥಾಪಕ ಗ್ರೆಗ್ ಮೊರನ್ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಝೂಂಕಾರ್ ತನ್ನ ಸೇವೆಯನ್ನು ಇನ್ನು 18 ತಿಂಗಳಲ್ಲಿ 13 ನಗರಗಳಿಗೆ ವಿಸ್ತರಿಸುವ ಗುರಿ ಹೊಂದಿದ್ದು, ಇನ್ನೂ 1,300 ಕಾರುಗಳನ್ನು ಖರೀದಿಸಲಾಗುವುದು ಎಂದು ಕಂಪನಿ ಸಹ ಸಂಸ್ಥಾಪಕ ಗ್ರೆಗ್ ಮೊರನ್ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಝೂಂಕಾರ್‍ನಿಂದ ಮನೆ ಬಾಗಿಲಿಗೆ ಸೇವೆಗಳನ್ನು ನೀಡಲಾಗುತ್ತಿದೆ. ಗ್ರಾಹಕರು ತಮಗಿಷ್ಟವಾದ ಕಾರನ್ನು ಬಾಡಿಗೆಗೆ ಪಡೆಯಬಹುದು ಎಂದು  ಹೇಳಿದರು. ಗ್ರಾಹಕರು ಕೇಳಿದ ಜಾಗಕ್ಕೆ ವಾಹನವನ್ನು ತಂದುಕೊಟ್ಟು ಹೋಗುವ ವಿಶೇಷ ಸೇವೆಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದರು. ಕಳೆದ ತಿಂಗಳು ಚಂಡೀಗಢದಲ್ಲಿ ಸೇವೆ  ಪ್ರಾರಂಭಿಸಲಾಗಿದೆ, ಇದೀಗ ವಿವಿಧ ಕಂಪನಿಗಳ 2000 ಕಾರುಗಳು ಲಭ್ಯವಿದೆ.

ಝೂಂಲೈಟ್, ಝೂಂಕ್ಲಾಸಿಕ್ ಹಾಗೂ ಝೂಂ ಎಕ್ಸ್‍ಎಲ್‍ನಂತಹ ವಿಶೇಷ ಪ್ಯಾಕೇಜ್‍ಗಳು ಲಭ್ಯವಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com