ವಾಣಿಜ್ಯ

ಡಾಟ್ಸನ್ ಕಂಪೆನಿಯಿಂದ ನೂತನ ರೆಡಿ-ಗೊ ಕಾರು ಬಿಡುಗಡೆ

ಡಾಟ್ಸನ್ ಕಂಪೆನಿಯಿಂದ ನೂತನ ರೆಡಿ-ಗೊ ಕಾರು ಬಿಡುಗಡೆ
ದೆಹಲಿಯಲ್ಲಿ ನಡೆದ ಡಾಟ್ಸನ್ ರೆಡಿ-ಗೊ ಕಾರಿನ ಉದ್ಘಾಟನೆ ವೇಳೆ ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅರುಣ್ ಮಲ್ಹೋತ್ರಾ
Published On :

ನವದೆಹಲಿ: ಜಪಾನ್ ಮೂಲದ ಕಂಪೆನಿ ನಿಸ್ಸಾನ್ ಒಡೆತನದ ಡಾಟ್ಸನ್ ಇಂಡಿಯಾ, ಮಂಗಳವಾರ 2.38 ಲಕ್ಷ ರೂಪಾಯಿಯ ರೆಡಿ-ಗೋ ಕಾರನ್ನು ಬಿಡುಗಡೆ ಮಾಡಿದೆ.
ರೆಡಿಗೋ ಒಟ್ಟು ಡಿ, ಎ, ಟಿ, ಟಿ(ಒ) ಮತ್ತು ಎಸ್ 5 ಮಾದರಿಗಳಲ್ಲಿ ಸಿಗುತ್ತಿದ್ದು, ಎಸ್ ಮಾದರಿಯ ಕಾರಿನ ಬೆಲೆ 3.34 ಲಕ್ಷ ರೂಪಾಯಿ ಆಗಿದೆ.

ಈ ಹೊಸ ಮಾದರಿ ಕಾರಿಗೆ ಜಪಾನ್ ನಲ್ಲಿ ಶೈಲಿ ನೀಡಲಾಗಿದ್ದು, ಭಾರತದಲ್ಲಿ ತಯಾರಿಸಿ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಲೀಟರ್ ಗೆ 25.17 ಕಿಲೋ ಮೀಟರ್ ಮೈಲೇಜ್ ಹೊಂದಿದೆ ಎಂದು ನಿಸ್ಸಾನ್ ಮೋಟಾರ್ ಇಂಡಿಯಾ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಮಲ್ಹೋತ್ರಾ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸಾಮಾನ್ಯ ಜನತೆಗೆ ಕೈಗಟಕುವ ದರದಲ್ಲಿ ಅತ್ಯಾಧುನಿಕ, ಆಕರ್ಷಕ ಶೈಲಿಯಲ್ಲಿ ಮಾರುಕಟ್ಟೆಗೆ ಬಿಡಲಾಗಿದ್ದು, ಡಾಟ್ಸನ್ ತತ್ವದ ಕನಸು, ಪ್ರವೇಶ ಮತ್ತು ನಂಬಿಕೆಗೆ ಬದ್ಧವಾಗಿದೆ ಎಂದು ಹೇಳಿದರು.

ನೂತನ ರೆಡಿ-ಗೋ ಕಾರಿನಲ್ಲಿ ಸುರಕ್ಷತೆಯ ವಿಷಯಗಳಾದ ಕಡಿಮೆ ಬ್ರೇಕಿಂಗ್ ಅಂತರ, ಹೆಚ್ಚಿನ ಶಕ್ತಿ, ಉತ್ತಮ ಗೋಚರತೆ ಮತ್ತು ರಸ್ತೆಯ ವಿಶಾಲವಾದ ನೋಟ, ಉನ್ನತ ಅಕ್ಷಾಧಾರ ವ್ಯವಸ್ಥೆ ಮತ್ತು ಚಾಲಕ ಏರ್ಬ್ಯಾಗ್ ಮೊದಲಾದವುಗಳನ್ನು ಒಳಗೊಂಡಿದೆ. ಕಾರಿನ ವೇಗ ಪ್ರತಿ ಗಂಟೆಗೆ 140 ಕಿಲೋ ಮೀಟರ್ ನಷ್ಟಿದ್ದು, ನಿರ್ವಹಣೆ ಮತ್ತು ಉತ್ತಮ ಚಾಲನೆ ಹೊಂದಿದೆ ಎಂದು ಮಲ್ಹೋತ್ರಾ ವಿವರಣೆ ನೀಡಿದರು.

ಕಾರು ಬಿಳಿ, ಸಿಲ್ವರ್, ಗ್ರೇ, ರೂಬಿ ಮತ್ತು ಲೈಮ್ ಬಣ್ಣಗಳಲ್ಲಿ ಸಿಗುತ್ತವೆ.

ಕಾರಿನ ಬೆಲೆ: ರಾಜಧಾನಿ ದೆಹಲಿಯಲ್ಲಿ ಡಿ ಮಾದರಿಯ ಕಾರಿನ ಬೆಲೆ 2.39 ಲಕ್ಷ, ಎ ಮಾದರಿಗೆ 2.82 ಲಕ್ಷ, ಟಿ ಮಾದರಿಗೆ 3.09 ಲಕ್ಷ, ಟಿ(ಒ) ಮಾದರಿಗೆ 3.19 ಲಕ್ಷ, ಎಸ್ ಮಾದರಿಗೆ 3.34 ಲಕ್ಷ ಸಿಗುತ್ತದೆ ಎಂದು ನಿರ್ದೇಶಕ ಅರುಣ್ ಮಲ್ಹೋತ್ರಾ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.