ಸೆನ್ಸೆಕ್ಸ್ 413 ಅಂಕ ಏರಿಕೆ, ರುಪಾಯಿ ಮೌಲ್ಯ 17 ಪೈಸೆಯಷ್ಟು ಏರಿಕೆ

ಬಜೆಟ್ ಮಂಡನೆ ಬಳಿಕ ಕುಸಿತಕಂಡು ಬಳಿಕ ಭಾರಿ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದ ಭಾರತೀಯ ಷೇರುಮಾರುಕಟ್ಟೆ ಬುಧವಾರವೂ ತನ್ನ ಏರಿಕೆಯ ನಾಗಾಲೋಟವನ್ನು ಮುಂದುವರೆಸಿದ್ದು, ಮಧ್ಯಾಹ್ನದ ವಹಿವಾಟಿನ ವೇಳೆಗೆ ಸೆನ್ಸೆಕ್ಸ್ ಬರೊಬ್ಬರಿ 413 ಅಂಕಗಳ ಏರಿಕೆ ಕಂಡಿದೆ...
ಸೆನ್ಸೆಕ್ಸ್ ಮತ್ತು ರುಪಾಯಿ (ಸಂಗ್ರಹ ಚಿತ್ರ)
ಸೆನ್ಸೆಕ್ಸ್ ಮತ್ತು ರುಪಾಯಿ (ಸಂಗ್ರಹ ಚಿತ್ರ)
Updated on: 

ಮುಂಬೈ: ಬಜೆಟ್ ಮಂಡನೆ ಬಳಿಕ ಕುಸಿತಕಂಡು ಬಳಿಕ ಭಾರಿ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದ ಭಾರತೀಯ ಷೇರುಮಾರುಕಟ್ಟೆ ಬುಧವಾರವೂ ತನ್ನ ಏರಿಕೆಯ ನಾಗಾಲೋಟವನ್ನು ಮುಂದುವರೆಸಿದ್ದು, ಮಧ್ಯಾಹ್ನದ ವಹಿವಾಟಿನ ವೇಳೆಗೆ ಸೆನ್ಸೆಕ್ಸ್ ಬರೊಬ್ಬರಿ 413 ಅಂಕಗಳ ಏರಿಕೆ ಕಂಡಿದೆ.

ನಿನ್ನೆಯ ವಹಿವಾಟಿನಲ್ಲಿ 1 ಸಾವಿರ ಅಂಕಗಳ ಏರಿಕೆ ಕಾಣುವ ಮೂಲಕ 7 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದ ಸೆನ್ಸೆಕ್ಸ್ ಅದೇ ಮಾದರಿಯ ವಹಿವಾಟನ್ನು ಮುಂದುವರೆಸಿದೆ. ಒಟ್ಟು 413.66 ಅಂಕಗಳ ಏರಿಕೆಯೊಂದಿಗೆ 24,193.01 ಅಂಕಗಳಿಗೇರಿರುವ ಸೆನ್ಸೆಕ್ಸ್ ಒಟ್ಟಾರೆ ಶೇ.1.7ರಷ್ಟು ಗಳಿಕೆ ಕಂಡಿದೆ. ಇನ್ನು ನಿಫ್ಟಿ ಕೂಡ 136.70 ಅಂಕಗಳ ಏರಿಕೆಯೊಂದಿಗೆ ತನ್ನ ಒಟ್ಟಾರೆ ಗಳಿಕೆಯನ್ನು 7, 359ಕ್ಕೇರಿಸಿಕೊಂಡಿದೆ.

ಪ್ರಮುಖವಾಗಿ ಬ್ಯಾಂಕಿಂಗ್ ಮತ್ತು ರಿಯಾಲಿಟಿ ಕ್ಷೇತ್ರಗಳಿಗೆ ಹೆಚ್ಚಿನ ಲಾಭವಾಗಿದ್ದು, ಹಿಂಡಾಲ್ಕೋ, ಎಸ್ ಬಿಐ, ಐಸಿಐಸಿಐ ಬ್ಯಾಂಕ್, ಅಡಾನಿ ಸಂಸ್ಥೆಗಳ ಷೇರುಗಳಿಗೆ ಹೆಚ್ಚಿನ ಲಾಭವಾಗಿದೆ. ಇನ್ನು ವಾಹನ ಕ್ಷೇತ್ರದಲ್ಲಿ ಹೀರೋಮೋಟೊಕಾರ್ಪ್ ಸಂಸ್ಥೆಯನ್ನು ಹೊರತು ಪಡಿಸಿ ಬಜಾಜ್ ಆಟೋ, ಮಹೀಂದ್ರ ಮತ್ತು ಮಹೀಂದ್ರ, ಐಟಿಸಿ, ಸನ್ ಫಾರ್ಮಾ ಮತ್ತು ಕೋಲ್ ಇಂಡಿಯಾ ಷೇರುಗಳ ಮೌಲ್ಯ ಇಳಿಕೆಯಾಗುವ ಮೂಲಕ ಈ ಸಂಸ್ಥೆಗಳು ನಷ್ಟವನ್ನು ಅನುಭವಿಸಿವೆ.

ರುಪಾಯಿ ಮೌಲ್ಯ ಏರಿಕೆ
ಇದೇ ವೇಳೆ ಡಾಲರ್ ಎದರು ರುಪಾಯಿ ಮೌಲ್ಯ ಕೂಡ ಏರಿಕೆಯಾಗಿದ್ದು, ಬರೊಬ್ಬರ 17 ಪೈಸೆ ಏರಿಕೆಯೊಂದಿಗೆ ರುಪಾಯಿ ಮೌಲ್ಯ 67.68ಕ್ಕೆ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com