ಅಮೆಜಾನ್ ನಲ್ಲಿ ಉತ್ಪನ್ನ ವಿತರಣೆಗೆ ಮೊದಲ ಬಾರಿಗೆ ಯುವತಿಯರ ನೇಮಕ

ಭಾರತದಲ್ಲಿ ಮೊದಲ ಬಾರಿಗೆ ಅಮೆಜಾನ್ ಉತ್ಪನ್ನ ಡೇಲಿವರಿಗಾಗಿ ಮಹಿಳೆಯರನ್ನು ನೇಮಕ ಮಾಡಿಕೊಂಡಿದೆ.
ಅಮೆಜಾನ್ ನಲ್ಲಿ ಉತ್ಪನ್ನ ವಿತರಣೆಗೆ ಮೊದಲ ಬಾರಿಗೆ ಯುವತಿಯರ ನೇಮಕ
ಅಮೆಜಾನ್ ನಲ್ಲಿ ಉತ್ಪನ್ನ ವಿತರಣೆಗೆ ಮೊದಲ ಬಾರಿಗೆ ಯುವತಿಯರ ನೇಮಕ
Updated on: 

ಚೆನ್ನೈ: ಭಾರತದಲ್ಲಿ ಮೊದಲ ಬಾರಿಗೆ ಅಮೆಜಾನ್ ಉತ್ಪನ್ನ ಡೇಲಿವರಿಗಾಗಿ ಯುವತಿಯರನ್ನು ನೇಮಕ ಮಾಡಿಕೊಂಡಿದೆ.
ಚೆನ್ನೈ ನ ಗಿಂಡಿ ಹಾಗೂ ತಿರುವನಂತಪುರಮ್ ನಲ್ಲಿ ಉತ್ಪನ್ನಗಳಿಗಾಗಿ ಮಹಿಳಾ ಡೆಲಿವರಿ ಕೇಂದ್ರ ಪ್ರಾರಂಭ ಮಾಡುವ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಅಮೆಜಾನ್ ವಿತರಣಾ ಕೆಲಸಕ್ಕೆ ಮಹಿಳೆಯರನ್ನು ನೇಮಿಸಿದೆ. ಮಹಿಳಾ ಉದ್ಯೋಗಿಗಳಿರುವ ಎರಡು ಉತ್ಪನ್ನ ವಿತರಣಾ ಕೆಂದ್ರಗಳನ್ನು ಕಳೆದ ವಾರವಷ್ಟೇ ಉದ್ಘಾಟನೆ ಮಾಡಲಾಗಿದೆ.  
ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ನೀಡಬೇಕೆಂಬ ಪ್ರಯತ್ನದ ಭಾಗವಾಗಿ ಮಹಿಳೆಯರೇ ಹೆಚ್ಚಿರುವ ಉತ್ಪನ್ನ ವಿತರಣಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು  ಅಮೆಜಾನ್ ಇಂಡಿಯಾದ ಸಾರಿಗೆ ವಿಭಾಗದ ನಿರ್ದೇಶಕ ಸ್ಯಾಮ್ಯುಯೆಲ್ ಥಾಮಸ್ ಹೇಳಿದ್ದಾರೆ.
ಕಳೆದ ವಾರ  ಉದ್ಘಾಟನೆಯಾಗಿರುವ ಉತ್ಪನ್ನ ವಿತರಣಾ ಕೇಂದ್ರಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಣೆ ಮಾಡುತ್ತಾರೆ. ಇಂಥದ್ದೇ ಮತ್ತಷ್ಟು ಕೇಂದ್ರಗಳನ್ನು ದೇಶದ ವಿವಿಧ ಭಾಗಗಳಲ್ಲಿ ಪ್ರಾರಂಭಿಸುವುದಾಗಿ ಅಮೆಜಾನ್ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com