

ಮುಂಬೈ: ಸತತ ಐದನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಏರಿಕೆ ಕಂಡಿದ್ದು ಬೆಳಗಿನ ವಹಿವಾಟಿನಲ್ಲಿ 100 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ.
ಬ್ಯಾಕಿಂಗ್ ವಲಯದಲ್ಲಿನ ಸಕಾರಾತ್ಮಕ ವಹಿವಾಟು ಭಾರತೀಯ ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಬರೊಬ್ಬರಿ 100 ಅಂಕಗಳ ಏರಿಕೆಯೊಂದಿಗೆ 24, 744.35ಕ್ಕೆ ಏರಿಕೆಯಾಗಿದೆ. ನಿಫ್ಟಿ ಕೂಡ 8.71 ಅಂಕಗಳ ಏರಿಕೆಯೊಂದಿಗೆ 7500 ಗಡಿ ದಾಟಿದೆ.
ಬ್ಯಾಕಿಂಗ್ ವಲಯ ಹೆಚ್ಚಾಗಿ ಲಾಭಾಂಶ ಕಂಡಿದ್ದು, ಔಷಧಿ, ಉಕ್ಕು, ಆಟೋ ಮತ್ತು ಇಂಧನ ವಲಯಗಳಿಗೆ ನಷ್ಟವಾಗಿದೆ. ಪ್ರಮುಖವಾಗಿ ಲುಪಿನ್, ಬಿಎಚ್ ಇಲ್, ಐಟಿಸಿ, ಒಎನ್ ಜಿಸಿ, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್ ಮತ್ತು ರಿಲಯನ್ಸ್ ಸಂಸ್ಥೆಗಳ ಷೇರುಗಳು ಲಾಭ ಕಂಡಿದ್ದರೆ, ಹೆಚ್ ಯುಎಲ್, ಐಸಿಐಸಿಐ, ಟಿಸಿಎಸ್ ಸಂಸ್ಥೆಗಳು ನಷ್ಟ ಅನುಭವಿಸಿವೆ.
ರುಪಾಯಿ ಮೌಲ್ಯ ಕುಸಿತ
ಇದೇ ವೇಳೆ ಡಾಲರ್ ಎದರು ರುಪಾಯಿ ಮೌಲ್ಯ ಕುಸಿತಗೊಂಡಿದ್ದು. 19 ಪೈಸೆಗಳ ಕುಸಿತದೊಂದಿಗೆ ರುಪಾಯಿ ಮೌಲ್ಯ 67.27ಕ್ಕೆ ಇಳಿಕೆಯಾಗಿದೆ. ಈ ಹಿಂದಿನ ವಹಿವಾಟಿನಲ್ಲಿ ರುಪಾಯಿ 26 ಪೈಸೆಗಳ ಏರಿಕೆಯೊಂದಿಗೆ, 67.08 ರು.ಗೆ ಸ್ಥಿರವಾಗಿತ್ತು.=