ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ, ಕೆಲವು ಕ್ಷೇತ್ರಗಳು ಮತ್ತಷ್ಟು ಚೇತರಿಕೆಯಾಗಬೇಕಿದೆ: ರಘುರಾಮ್ ರಾಜನ್

ಭಾರತೀಯ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆಯಾದರೂ, ಇನ್ನೂ ಕೆಲವು ಕ್ಷೇತ್ರಗಳು ಒತ್ತಡ ಎದುರಿಸುತ್ತಿದ್ದು ಮತ್ತಷ್ಟು ಚೇತರಿಕೆ ಕಾಣಬೇಕಿದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ರಘುರಾಮ್ ರಾಜನ್
ರಘುರಾಮ್ ರಾಜನ್
Updated on: 

ಭುವನೇಶ್ವರ್: ಭಾರತೀಯ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆಯಾದರೂ, ಇನ್ನೂ ಕೆಲವು ಕ್ಷೇತ್ರಗಳು ಒತ್ತಡ ಎದುರಿಸುತ್ತಿದ್ದು ಮತ್ತಷ್ಟು ಚೇತರಿಕೆ ಕಾಣಬೇಕಿದೆ ಎಂದು ರಿಸರ್ವ್ ಬ್ಯಾಂಕ್ ನ ಗೌರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಒಡಿಶಾದಲ್ಲಿ ಆಯೋಜಿಸಲಾಗಿದ್ದ ಭಾರತ:ಭವಿಷ್ಯ ಮತ್ತು ಸವಾಲುಗಳು (ಇಂಡಿಯಾ ಪ್ರಾಸ್ಪೆಕ್ಟ್ಸ್ ಆಂಡ್ ಚಾಲೆಂಜಸ್) ವಿಷಯದ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜನ್, ಕೆಲವು ಕ್ಷೇತ್ರಗಳು ಉತ್ತಮವಾಗಿ ಮುನ್ನಡೆಯುತ್ತಿದ್ದರೆ, ಕೃಷಿ ಸೇರಿದಂತೆ ಮತ್ತೆ ಇತರ ಕ್ಷೇತ್ರಗಳು ಇನ್ನೂ ಚೇತರಿಕೆ ಕಾಣಬೇಕಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಣ್ಣ ಕೈಗಾರಿಕೆ ಮೇಲೆ ಲಘುವಾದ ನಿಯಂತ್ರಣ ಇರಬೇಕು ಎಂದು ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದು, ಬ್ರಿಟನ್(ಯುಕೆ) ನಲ್ಲಿ ಸಣ್ಣ ಕೈಗಾರಿಕೆಗಳ ಮೇಲೆ ಲಘುವಾದ ನಿಯಂತ್ರಣ ಇರಿಸಲಾಗಿದೆ. ಆದರೆ ಇಟಾಲಿಯಲ್ಲಿ ಈ ರೀತಿಯ ನಿಯಂತ್ರಣ ಇಲ್ಲ. ಅದ್ದರಿಂದ ಇಟಾಲಿಗಿಂತ ಬ್ರಿಟನ್ ನಲ್ಲಿ ಸಣ್ಣ ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆ ಕಂಡಿವೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ಇನ್ನು ಸಣ್ಣ ಕಂಪನಿಗಳಿಗೆ ಉದ್ಯಮ ಪ್ರಾರಂಭಿಸುವ, ನಡೆಸುವ ಪ್ರಕ್ರಿಯೆಗಳನ್ನು ಸುಲಭಗೊಳಿಸುವುದರ ಪರವಾಗಿ ಮಾತನಾಡಿದ್ದು ಲೈಸೆನ್ಸ್ ರಾಜ್ ನಿರ್ಮೂಲನೆಯಾಗಿದೆಯಾದರೂ ಇನ್ಸ್ ಪೆಕ್ಟರ್ ರಾಜ್ ಇನ್ನೂ ಚಾಲ್ತಿಯಲ್ಲಿದ್ದು ಉದ್ಯಮ ಪ್ರಾರಂಭಿಸುವ ಪ್ರಕ್ರಿಯೆ ಮತ್ತಷ್ಟು ಸುಲಭಗೊಳ್ಳಬೇಕಿದೆ, ಇದರಿಂದ ಉದ್ಯೋಗ ಸೃಷ್ಟಿಯಾಗಿ ಆರ್ಥಿಕತೆ ಬೆಳವಣಿಗೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com