ಮತ್ತೆ ಕುಸಿದ ಸೆನ್ಸೆಕ್ಸ್; 300 ಅಂಕಗಳ ಕಡಿತ, ನಿಫ್ಚಿ ಕೂಡ ಕುಸಿತ

ದಿನದ ಆರಂಭದಲ್ಲೇ ಭಾರತೀಯ ಷೇರುಮಾರುಕಟ್ಟೆ 300 ಅಂಕಗಳಷ್ಟು ಕುಸಿದಿದ್ದು, ನಿಫ್ಟಿ ಕೂಡ 8200 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಇಳಿದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಮುಂಬೈ: ದಿನದ ಆರಂಭದಲ್ಲೇ ಭಾರತೀಯ ಷೇರುಮಾರುಕಟ್ಟೆ 300 ಅಂಕಗಳಷ್ಟು ಕುಸಿದಿದ್ದು, ನಿಫ್ಟಿ ಕೂಡ 8200 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಇಳಿದಿದೆ.

ನೋಟು ನಿಷೇಧದ ಬಳಿಕ ಉಂಟಾಗಿರುವ ಪರಿಸ್ಥಿತಿ ಹಿನ್ನಲೆಯಲ್ಲಿ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದೇ ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ದಿನದ ಆರಂಭದಲ್ಲೇ ಸೆನ್ಸೆಕ್ಸ್ 300  ಅಂಕಗಳನ್ನು ಕಳೆದುಕೊಳ್ಳುವ ಮೂಲಕ 26,474.55 ಅಂಕಗಳಿಗೆ ಇಳಿದಿದ್ದರೆ, ನಿಫ್ಟಿ ಕೂಡ 76.90 ಅಂಕ ಕುಸಿತದೊಂದಿಗೆ 8219.40 ಅಂಕಗಳೊಂದಿಗೆ ವಹಿವಾಟು ನಡೆಸುತ್ತಿದೆ.

ಕುಸಿತದಿಂದಾಗ ಬ್ಯಾಂಕ್ ಆಫ್ ಬರೋಡಾ ಷೇರುಗಳ ಮೌಲ್ಯದಲ್ಲಿ ಶೇ.6 ರಷ್ಟು ಕುಸಿತವಾಗಿದ್ದು, ಎಸ್ ಬಿಐ, ಐಸಿಐಸಿಐ ಬ್ಯಾಂಕ್ ಷೇರುಗಳ ಮೌಲ್ಯ ಕೂಡ ಶೇ. 0.18ರಷ್ಟು ಕುಸಿತಗೊಂಡಿವೆ. ಇನ್ನು ಆಟೋ ಮೊಬೈಲ್ ಕ್ಷೇತ್ರದಲ್ಲಿ  ಮಾರುತಿ ಸುಜುಕಿ ಹಾಗೂ ಟಾಟಾ ಮೋಟಾರ್ಸ್ ಸಂಸ್ಥೆಯ ಷೇರುಗಳ ಮೌಲ್ಯ ಕುಸಿದಿದೆ. ಭಾರತೀಯ ಹೂಡಿಕೆದಾರರ ಮಾರಾಟ ಪರಿಸ್ಥಿತಿ ಮುಂದುವರೆದರೆ ಷೇರುಮಾರುಕಟ್ಟೆ ಮತ್ತಷ್ಟು ಅಂಕಗಳ ಕುಸಿತ ಕಾಣಲಿದೆ ಎಂದು ತಜ್ಞರು  ಅಭಿಪ್ರಾಯ ಪಟ್ಟಿದ್ದಾರೆ. ಅಂತೆಯೇ ಪ್ರಸ್ತುತ ಭಾರತದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟು ತಹಬದಿಗೆ ಬರುವವರೆಗೂ ಭಾರತೀಯ ಷೇರುಮಾರುಕಟ್ಟೆ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಬಹುದು ಎಂದು  ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com