ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯುವ ಸಾಧ್ಯತೆಯಿರುವುದರಿಂದ ಮಾರುಕಟ್ಟೆ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಈ ಮಧ್ಯೆ ರಿಸರ್ವ್ ಬ್ಯಾಂಕ್, ರೂಪಾಯಿ ಮೌಲ್ಯ ದಿಢೀರ್ ಇಳಿಕೆಯಾಗಿರುವುದನ್ನು ಹಿಡಿದಿಡುವ ಪ್ರಯತ್ನವನ್ನು ಮಾಡಬೇಕಾಗಿದೆ ಎಂದು ವಹಿವಾಟುದಾರರು ಹೇಳುತ್ತಾರೆ. ಈ ಬಗ್ಗೆ ಆರ್ ಬಿಐ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.