ನವದೆಹಲಿ: ಆದಾಯ ಪ್ರಕಟಣೆ ಯೋಜನೆಯಡಿ(ಐಡಿಎಸ್) ಮೊದಲ ಕಂತಿಗೆ ತೆರಿಗೆ ಮತ್ತು ದಂಡದ ಹಣವನ್ನು ಪಾವತಿಸಲು ಕೊನೆಯ ದಿನಾಂಕವನ್ನು ಮುಂದಿನ ವರ್ಷ ಸೆಪ್ಟೆಂಬರ್ ವರೆಗೆ ಮುಂದೂಡಲಾಗಿದೆ.
ಬ್ಯಾಂಕುಗಳು ತೆರಿಗೆ ನಗದುಗಳನ್ನು ಸ್ವೀಕರಿಸಿ ಮತ್ತು ತೆರಿಗೆ ಘೋಷಣೆದಾರರಲ್ಲಿ ನಗದಿನ ಮೂಲವನ್ನು ಕೇಳಬಾರದು ಎಂದು ಭಾರತೀಯ ಬ್ಯಾಂಕುಗಳ ಒಕ್ಕೂಟ ಬ್ಯಾಂಕ್ ಗಳಿಗೆ ಪತ್ರ ಬರೆದಿದೆ.
ಆದಾಯ ಘೋಷಣೆ ಯೋಜನೆಯ ಮೊದಲನೇ ಕಂತು ಸೆಪ್ಟೆಂಬರ್ 30ಕ್ಕೆ ಕೊನೆಯಾಗಿದ್ದು, ತೆರಿಗೆದಾರರು ಇದೇ 30ರೊಳಗೆ ದಂಡ ಕಟ್ಟಿ ತೆರಿಗೆ ಪಾವತಿಸಬೇಕಾಗಿತ್ತು. ಆದರೆ ಅದನ್ನೀಗ ಮುಂದಿನ ವರ್ಷ ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿದೆ.