

ನವದೆಹಲಿ: ಸೆಪ್ಟೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ. 5.05 ರಿಂದ ಶೇ.4.31 ಕ್ಕೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ಹಣದುಬ್ಬರದಿಂದ ಪ್ರಸಕ್ತ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಹಣದುಬ್ಬರದ ಪ್ರಮಾಣ ಕಡಿಮೆಯಾಗಿದ್ದು, ಕಳೆದ ವರ್ಷದ ಆಗಸ್ಟ್- ಸೆಪ್ಟೆಂಬರ್ ನಲ್ಲಿ ಹಣದುಬ್ಬರ ಶೇ.4.41 ರಷ್ಟು ದಾಖಲಾಗಿತ್ತು. ಅ.13 ರಂದು ಕಳೆದ ತಿಂಗಳ ಹಣದುಬ್ಬರ ಅಂಕಿ ಅಂಶಗಳು ಪ್ರಕಟವಾಗಿದೆ. ಆಗಸ್ಟ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಕನಿಷ್ಠ ಮಟ್ಟವಾದ ಶೇ 5.05ಕ್ಕೆ ಇಳಿದಿತ್ತು. ತರಕಾರಿ, ಆಹಾರ ಮತ್ತು ಪಾನೀಯಗಳ ಬೆಲೆ ಏರಿಕೆಯ ಗತಿಯು ನಿಧಾನವಾಗಿದ್ದರಿಂದ ಚಿಲ್ಲರೆ ಹಣದುಬ್ಬರ ಕಡಿಮೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.