ಮುಂಬೈ: ಸೋಮವಾರ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ದಿಢೀರನೆ 546 ಅಂಕ ಕುಸಿದು 28 ಸಾವಿರದ 251 ಕ್ಕೆ ತಲುಪಿತು. ನಿಫ್ಟಿ ಸಹ ಇಂದಿನ ವಹಿವಾಟು ಆರಂಭಕ್ಕೆ 8 ಸಾವಿರದ 700ಕ್ಕೆ ತಲುಪಿತು. ಅಮೆರಿಕಾದ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ಏರಿಕೆಯಾಗುವ ಊಹಾಪೋಹ ಕೇಳಿಬಂದ ಹಿನ್ನೆಲೆಯಲ್ಲಿ ಷೇರುಗಳು ಇಂದು ಅಧಿಕವಾಗಿ ಮಾರಾಟಗೊಂಡು ಸೆನ್ಸೆಕ್ಸ್ ಕುಸಿತಗೊಂಡಿತು.