ಆಗಸ್ಟ್ ನಲ್ಲಿ ಸಗಟು ಹಣದುಬ್ಬರ ಶೇ.3.74 ಕ್ಕೆ ಏರಿಕೆ

ಜುಲೈ ನಲ್ಲಿ ಶೇ.3.55 ರಷ್ಟಿದ್ದ ಸಗಟು ದರ ಆಧಾರಿತ ಹಣದುಬ್ಬರ ಆಗಸ್ಟ್ ನಲ್ಲಿ ಶೇ.3.74 ಕ್ಕೆ ಏರಿಕೆಯಾಗಿದೆ.
ಹಣದುಬ್ಬರ
ಹಣದುಬ್ಬರ
Updated on: 

ನವದೆಹಲಿ: ಜುಲೈ ನಲ್ಲಿ ಶೇ.3.55 ರಷ್ಟಿದ್ದ ಸಗಟು ದರ ಆಧಾರಿತ ಹಣದುಬ್ಬರ ಆಗಸ್ಟ್ ನಲ್ಲಿ ಶೇ.3.74 ಕ್ಕೆ ಏರಿಕೆಯಾಗಿದೆ.

ಸೆ.14 ರಂದು ಹಣದುಬ್ಬರ ಅಂಕಿ-ಅಂಶಗಳು ಪ್ರಕಟವಾಗಿದ್ದು, ಕೆಲವು ಪದಾರ್ಥಗಳ ಹಣದುಬ್ಬರ ಏರಿಕೆಯ ಸ್ಥಿತಿಯಲ್ಲೇ ಇದ್ದು, ಆಲೂಗಡ್ಡೆ ಬೆಲೆ ಶೇ.66.72 ಧಾನ್ಯಗಳ ಬೆಲೆ ಶೇ.34.55 ಹಣ್ಣುಗಳ ಬೆಲೆ ಶೇ.13.91 ರಷ್ಟು ಏರಿಕೆಯಾಗಿದೆ. ಆದರೆ ಕಳೆದ ವರ್ಷ ಆಗಸ್ಟ್ ಗೆ ಹೋಲಿಕೆ ಮಾಡಿದರೆ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಈರುಳ್ಳಿ ಬೆಲೆ ಮಾತ್ರ ಶೇ.64.19 ರಷ್ಟು ಇಳಿಕೆಯಾಗಿದೆ.  

ಇನ್ನು ಉತ್ಪಾದಿತ ಸರಕುಗಳು ಹಾಗೂ ಇಂಧನದ ವಾರ್ಷಿಕ ಹಣದುಬ್ಬರ ಮಧ್ಯಮ ಸ್ಥರದಲ್ಲಿದ್ದು ಅನುಕ್ರಮವಾಗಿ ಶೇ.2.42 ಹಾಗೂ 1.62 ರಷ್ಟಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಸೆ.12 ರಂದು ಬಿಡುಗಡೆಯಾದ ಅಂಕಿ-ಅಂಶಗಳ ಪ್ರಕಾರ ಗ್ರಾಹಕ ದರ ಆಧಾರಿತ ಹಣದುಬ್ಬರ ಆಗಸ್ಟ್ ನಲ್ಲಿ 100 ಬೇಸಿಸ್ ಪಾಯಿಂಟ್ ಗಳಷ್ಟು (ಶೇ.5.05 ಕ್ಕೆ) ಏರಿಕೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com