

ನವದೆಹಲಿ: ಒಟ್ಟು 2,600 ಕೋಟಿ ವೆಚ್ಚದಲ್ಲಿ ಒಂಬತ್ತು ಹೆದ್ದಾರಿ ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಒಟ್ಟು 241,37 ಕೋಟಿ ವೆಚ್ಚದಲ್ಲಿ ಅಲಹಾಬಾದ್-ಮಿರ್ಜಾಪುರ್ ಹೆದ್ದಾರಿ ಪುನರ್ವಸತಿ ಮತ್ತು ಉನ್ನತೀಕರಣ(400.878 ರಿಂದ 450 ಕಿ.ಮೀ) ಕಾಮಗಾರಿ ಸೇರಿದಂತೆ ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ-76ಯ ದ್ವಿಪಥ ರಸ್ತೆ ನಿರ್ಮಾಣ ಮಾಡಲಾಗುವುದು.
ಒಟ್ಟು 176.94 ಕೋಟಿ ವೆಚ್ಚದಲ್ಲಿ ಉತ್ತರಪ್ರದೇಶದ ರಾಷ್ಟ್ರೀಯ ಹೆದ್ದಾರಿ-730ಯಲ್ಲಿ (ಹುಲಿ ಸಂರಕ್ಷಣಾರಣ್ಯ 20.200 ರಿಂದ 23.400 ಕಿ.ಮೀ ಹೊರತುಪಡಿಸಿ)ಪಿಲಿಬಿತ್-ಪುರಾನ್ಪುರ್ ಸೆಕ್ಷನ್ 38 ಕಿಮೀ ಉದ್ದದ ದ್ವಿಪಥ ರಸ್ತೆ ನಿರ್ಮಾಣ.
ಒಟ್ಟು 325.81 ಕೋಟಿ ವೆಚ್ಚದಲ್ಲಿ (ಬೈಪಾಲ್ ರಸ್ತೆ ದಿಮಾಪುರ್ ನಿಂದ ಕೋಹಿಮಾ 34.171 ಕಿ.ಮೀ) ರಾಜಧಾನಿ ರಸ್ತೆ ನಿರ್ಮಾಣ. 2016-17ರ ನಾಗಲ್ಯಾಂಡ್ ನಲ್ಲಿ ಅಂತಾರಾಜ್ಯ ಸಂಪರ್ಕ ಯೋಚನೆ ಅಡಿಯಲ್ಲಿ ಈ ಕಾಮಗಾರಿಗೂ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಇದರ ಜತೆಗೆ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.