ರಿಲಯನ್ಸ್ ಜಿಯೋ ಗಿಂತ ಅಗ್ಗದ ಉಚಿತ ವಾಯ್ಸ್ ಕಾಲ್ ಯೋಜನೆ ಘೋಷಿಸಿದ ಬಿಎಸ್ಎನ್ಎಲ್

ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಎಬ್ಬಿಸಿರುವ ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಇತರೆ ಟೆಲಿಕಾಂ ಸಂಸ್ಥೆಗಳು ಮುಂದಾಗಿರುವಂತೆಯೇ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ತನ್ನ ಗ್ರಾಹಕರಿಗೆ ಹೊಸ ಯೋಜನೆಗಳನ್ನು ಘೋಷಿಸುತ್ತಿದೆ.
ಬಿಎಸ್ ಎನ್ ಎಲ್ ಮತ್ತು ರಿಲಯನ್ಸ್ ಜಿಯೋ (ಸಂಗ್ರಹ ಚಿತ್ರ)
ಬಿಎಸ್ ಎನ್ ಎಲ್ ಮತ್ತು ರಿಲಯನ್ಸ್ ಜಿಯೋ (ಸಂಗ್ರಹ ಚಿತ್ರ)
Updated on: 

ನವದೆಹಲಿ: ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಎಬ್ಬಿಸಿರುವ ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಇತರೆ ಟೆಲಿಕಾಂ ಸಂಸ್ಥೆಗಳು ಮುಂದಾಗಿರುವಂತೆಯೇ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್  ಎಲ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ತನ್ನ ಗ್ರಾಹಕರಿಗೆ ಹೊಸ ಯೋಜನೆಗಳನ್ನು ಘೋಷಿಸುತ್ತಿದೆ.

ಈ ಹಿಂದೆ 1, 199 ರು.ಗಳ ಬಿಬಿಜಿ ಕಾಂಬೋ ಪ್ಲಾನ್ ಘೋಷಣೆ ಮಾಡಿದ್ದ ಬಿಎಸ್ಎನ್ಎಲ್ ಇದೀಗ ತನ್ನ ಉಚಿತ ಕರೆಗಳ ಯೋಜನೆಯೊಂದನ್ನು ಘೋಷಣೆ ಮಾಡಿದೆ. ಜಿಯೋ ನೆಟ್ವರ್ಕ್ ನಲ್ಲಿ   4ಜಿ ಗ್ರಾಹಕರಿಗೆ ಮಾತ್ರ ಉಚಿತ ಕರೆ ಸೌಲಭ್ಯವಿದ್ದರೆ, ಬಿಎಸ್ಎನ್ಎಲ್ ನ ನೂತನ ಯೋಜನೆ ಅನ್ವಯ ಈ ಹೊಸ ಸೌಲಭ್ಯ 4 ಜಿ ಗ್ರಾಹಕರ ಜತೆಗೆ 2ಜಿ ಹಾಗೂ 3ಜಿ ಬಳಕೆದಾರರಿಗೂ  ಲಭ್ಯವಾಗಲಿದೆ.

ಆದರೆ ಈ ಸೌಲಭ್ಯ ಬಿಎಸ್‌ಎನ್‌ಎಲ್ ಮೊಬೈಲ್ ಬ್ರಾಡ್‌ಬ್ಯಾಂಡ್ ಹೊಂದಿದವರಿಗೆ ಮಾತ್ರ ದೊರೆಯಲಿದೆ. ಜನರು ತಮ್ಮ ದಿನದ ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆಯುವುದರಿಂದ ಈ  ಯೋಜನೆ ಉಪಯುಕ್ತವಾಗುತ್ತದೆ ಎಂಬುದು ಸಂಸ್ಥೆಯ ಹೇಳಿಕೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಸ್ ಎನ್ ಎಲ್ ನ ಚೇರ್ಮನ್ ಹಾಗೂ ಎಂಡಿ ಅನುಪಮ್ ಶ್ರೀವಾತ್ಸವ್ ಅವರು, "ಜಿಯೋ ನೆಟ್ವರ್ಕ್ ಘೋಷಣೆಯಾದ ಬಳಿಕ ನಾವು ಮಾರುಕಟ್ಟೆಯನ್ನು  ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನಾವು ಕೂಡ ಆಜೀವ ಪರ್ಯಂತ ಉಚಿತಕರೆ ಸೌಲಭ್ಯ ನೀಡಲು ನಿರ್ಧರಿಸಿದ್ದೇವೆ. ನೂತನ ವರ್ಷಾರಂಭದಿಂದ ಈ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು  ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com