2017-18ನೇ ಸಾಲಿನ ಮೊದಲ ದ್ವಿ ಮಾಸಿಕ ವಿಮರ್ಶೆ ಸಭೆಯಲ್ಲಿ ಈ ಪ್ರಕಟಣೆಯನ್ನು ಆರ್ ಬಿಐ ಹೊರಡಿಸಿದೆ. ಕಳೆದ ಫೆಬ್ರವರಿ 8ರಂದು ನಡೆದ ಯೋಜನಾ ವಿಮರ್ಶಾ ಸಭೆಯಲ್ಲಿ ಆರ್ ಬಿಐ ರೆಪೊ ದರದಲ್ಲಿ ಯಾವುದೇ ವ್ಯತ್ಯಾಸ ಮಾಡದೆ ಶೇಕಡಾ 6.25ರಷ್ಟು ಕಾಯ್ದುಕೊಂಡಿತ್ತು. ದೇಶದ ಆರ್ಥಿಕತೆ ಮೇಲೆ ಹಣದುಬ್ಬರ ಮತ್ತು ನೋಟುಗಳ ಅಮಾನ್ಯತೆಯ ಪರಿಣಾಮವನ್ನು ಸ್ಪಷ್ಟವಾಗಿ ತಿಳಿದುಕೊಂಡ ನಂತರ ರೆಪೊ ದರ ಮತ್ತು ರಿವರ್ಸ್ ರೆಪೊ ದರದಲ್ಲಿ ವ್ಯತ್ಯಾಸ ಮಾಡುವುದಾಗಿ ಪ್ರಕಟಿಸಿತ್ತು.