ಪಿಚ್ಚೈ ಕಳೆದ ವರ್ಷ 6,50,000 ಅಮೆರಿಕನ್ ಡಾಲರ್ ವೇತನ ಪಡೆದಿದ್ದು, ಅವರು 2015ರಲ್ಲಿ ಗಳಿಸಿದ 6,52,500 ಅಮೆರಿಕನ್ ಡಾಲರ್ ಗಿಂತ ಸ್ವಲ್ಪ ಕಡಿಮೆಯಾಗಿದೆ. ಅವರು 2015ರಲ್ಲಿ 99.8 ಮಿಲಿಯನ್ ಷೇರು ಅವಾರ್ಡ್ ಗಳಿಸಿದ್ದರು.2015ರ ಆಗಸ್ಟ್‌ನಲ್ಲಿ ಕಂಪೆನಿಯು ಮರು ನೋಂದಾವಣೆಗೊಂಡಾಗ ಸಿಇಓ ಹುದ್ದೆಗೇರಿದ ಪಿಚೈಗೆ 2016ರಲ್ಲಿ 19.87 ಕೋಟಿ ಡಾಲರ್ ಮೌಲ್ಯದ ತನ್ನ ಶೇರುಗಳನ್ನು ಕಂಪೆನಿ ನೀಡಿತು. 2015ರಲ್ಲಿ ಪಿಚೈ ಹೊಂದಿದ್ದ 9.98 ಕೋಟಿ ಡಾಲರ್ ಮೌಲ್ಯದ ಶೇರುಗಳು ಈ ಮೂಲಕ ದುಪ್ಪಟ್ಟು ಆಯಿತು.