ಏರ್ ಟೆಲ್ ಗ್ರಾಹಕನಿಗೆ ಬಂತು 1.86 ಲಕ್ಷ ರೂ ಬಿಲ್!

ಲಕ್ಷಗಟ್ಟಲೆ ವಿದ್ಯುತ್ ಬಿಲ್, ಟೆಲಿಫೋನ್ ಬಿಲ್ ಬಂದಿರುವ ವರದಿಗಳನ್ನು ನೋಡಿರುತ್ತೀರಿ, ಕೇಳಿರುತ್ತೀರಿ, ಆದರೆ ಇಲ್ಲೊಂದು ಘಟನೆಯಲ್ಲಿ ಏರ್ ಟೆಲ್ ಗ್ರಾಹಕರೊಬ್ಬರಿಗೆ 1.86 ಬಿಲ್ ಕಳಿಸಿದೆ.
ಏರ್ ಟೆಲ್
ಏರ್ ಟೆಲ್
Updated on: 
ನವದೆಹಲಿ: ಲಕ್ಷಗಟ್ಟಲೆ ವಿದ್ಯುತ್ ಬಿಲ್, ಟೆಲಿಫೋನ್ ಬಿಲ್ ಬಂದಿರುವ ವರದಿಗಳನ್ನು ನೋಡಿರುತ್ತೀರಿ, ಕೇಳಿರುತ್ತೀರಿ, ಆದರೆ ಇಲ್ಲೊಂದು ಘಟನೆಯಲ್ಲಿ ಏರ್ ಟೆಲ್ ಗ್ರಾಹಕರೊಬ್ಬರಿಗೆ 1.86 ಲಕ್ಷ ಬಿಲ್ ಕಳಿಸಿದೆ. 
ಇಂಡಿಯಾ ಟುಡೆ ಟೆಕ್ ವರದಿಯ ಪ್ರಕಾರ ನಿತಿನ್ ಸೇಥಿ ಎಂಬ ನವದೆಹಲಿಯ ನಿವಾಸಿಯೊಬ್ಬರಿಗೆ ಏರ್ ಟೆಲ್ ನಿಂದ  1.86 ಬಿಲ್ ಬಂದಿದ್ದು, ಬಿಲ್ ನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ಜೂ.8-ಜು.7 ನಡುವಿನ ಅವಧಿಗೆ 1.86 ಲಕ್ಷ ಬಿಲ್ ಬಂದಿದೆ. ಆದರೆ ಇದನ್ನು ತಾಂತ್ರಿಕ ದೋಷ ಎಂದು ಏರ್ ಟೆಲ್ ಹೇಳಿದೆ. 
ರಜೆಯ ಹಿನ್ನೆಲೆಯಲ್ಲಿ ಕುಟುಂಬದವರೊಂದಿಗೆ ದುಬೈ ಗೆ ತೆರಳಿದ್ದ ನಿತಿನ್ ಸೇಥಿ, 10 ದಿನಗಳ ಇಂಟರ್ ನ್ಯಾಷನಲ್ ರೋಮಿಂಗ್ ಪ್ಯಾಕ್ ಹಾಕಿಸಿದ್ದರು. ಆದರೆ ಅದು ಭಾರತಕ್ಕೆ ವಾಪಸ್ ಬಂದ ನಂತರವೂ ನಿಂತಿರಲಿಲ್ಲ. ಈಗ ಮಾಧ್ಯಮಗಳಲ್ಲಿ ಬೃಹತ್ ಪ್ರಮಾಣದ ಬಿಲ್ ಬಗ್ಗೆ ವರದಿಗಳಾದ ನಂತರ ಏರ್ ಟೆಲ್ ಸಂಸ್ಥೆ ಸಮಸ್ಯೆಯನ್ನು ಸರಿಪಡಿಸುವುದಕ್ಕೆ ಒಪ್ಪಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com