ರೂ. 1 ಕೋಟಿ ವರಗಿನ ಉಳಿತಾಯ ಖಾತೆ ಬ್ಯಾಲೆನ್ಸ್ ಗೆ 0.5% ಬಡ್ಡಿ ದರ ಕಡಿತಗೊಳಿಸಿದ ಎಸ್ ಬಿಐ!

ಪ್ರಮುಖ ಬೆಳವಣಿಗೆಯೊಂದರಲ್ಲಿ ದೇಶದ ಅತೀ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ತನ್ನ ಗ್ರಾಹಕರಿಗೆ ಶಾಕ್ ನೀಡಿದ್ದು, ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಪ್ರಮುಖ ಬೆಳವಣಿಗೆಯೊಂದರಲ್ಲಿ ದೇಶದ ಅತೀ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ತನ್ನ ಗ್ರಾಹಕರಿಗೆ ಶಾಕ್ ನೀಡಿದ್ದು, ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ.

ಎಸ್ ಬಿಐ ಉಳಿತಾಯ ಖಾತೆ ಮೇಲಿನ ಬಡ್ಡಿದರವನ್ನು ಶೇಕಡಾ 4ರಿಂದ ಶೇಕಡಾ 3.5ಕ್ಕೆ ಇಳಿಕೆ ಮಾಡಿದ್ದು, 1 ಕೋಟಿ ರುಪಾಯಿಗಿಂತ ಕಡಿಮೆ ಠೇವಣಿ ಇಟ್ಟ ಗ್ರಾಹಕರು ಇಂದಿನಿಂದ ವಾರ್ಷಿಕ ಶೇ.3.5ರಷ್ಟು ಬಡ್ಡಿ ಪಡೆಯಲಿದ್ದಾರೆ.  ಆದರೆ 1 ಕೋಟಿ ರು.ಗೂ ಅಧಿಕ ಠೇವಣಿ ಇಟ್ಟಿರುವ ಉಳಿತಾಯಖಾತೆ ಗ್ರಾಹಕರ ಬಡ್ಡಿದರದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಲಾಗಿಲ್ಲ. ಈ ಹಿಂದಿನ ಶೇ.4.0ರಷ್ಟು ಬಡ್ಡಿದರ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಕಳೆದ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ಮಾಡಿದ್ದರು. ಪರಿಣಾಮ ದೇಶದ ಪ್ರಮುಖ ಬ್ಯಾಂಕ್ ಗಳಿಗೆ ಅಪಾರ ಪ್ರಮಾಣದ ನಗದು ಹರಿದು ಬಂದಿತ್ತು. ಎಸ್ ಬಿಐಗೂ ಅತೀ ಹೆಚ್ಚು ಪ್ರಮಾಣದಲ್ಲಿ  ಹಣ ಡೆಪಾಸಿಟ್ ಆಗಿತ್ತು. ಮಾರ್ಚ್ 31, 2017ರ ವರದಿಯಂತೆ ಎಸ್ ಬಿಐ ನಲ್ಲಿ 7.43 ಲಕ್ಷ ಕೋಟಿ ರುಪಾಯಿ ಉಳಿತಾಯ ಖಾತೆಗಳಲ್ಲಿ ಠೇವಣಿ ಇಡಲಾಗಿತ್ತು. ಒಟ್ಟಾರೆ ಬ್ಯಾಂಕ್ ನ ಠೇವಣಿಯಲ್ಲಿ ಇವುಗಳ ಪಾಲೇ ಶೇಕಡಾ  36.4ರಷ್ಟಾಗುತ್ತದೆ ಎಂದು ಎಸ್ ಬಿಐ ತಿಳಿಸಿತ್ತು.

 

ಉಳಿತಾಯ ಖಾತೆಗೆ ಎರಡು ವಿಧದ ಬಡ್ಡಿ ದರ
ಇನ್ನು ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, 1 ಕೋಟಿಗೂ ಕಡಿಮೆ ಹಣ ಇರುವ ಖಾತೆಗಳಿಗೆ 3.5 ರ ಬಡ್ಡಿದರ ಹಾಗೂ 1 ಕೋಟಿಗೂ ಅಧಿಕ ಠೇವಣಿ ಇರುವ ಖಾತೆಗಳಿಗೆ  ಶೇ.4.0ರಷ್ಟು ಬಡ್ಡಿದರ ನಿಗದಿ ಪಡಿಸಲಾಗಿದೆ. ಹೆಚ್ಚಿನ ಪ್ರಮಾಣದ ಡೆಪಾಸಿಟ್ ಗಳಿಂದಾಗಿ ಬ್ಯಾಂಕ್ ಗಳು ನಷ್ಟ ಅನುಭವಿಸುವ ಆತಂಕ ಎದುರಾಗಿತ್ತು. ಇದೇ ಕಾರಣಕ್ಕೆ ಬ್ಯಾಂಕ್ ಗಳಿಗೆ ಆಗುವ ನಷ್ಟವನ್ನು ತಪ್ಪಿಸುವ ನಿಟ್ಟಿನಲ್ಲಿ ಎಸ್  ಬಿಐ ಬಡ್ಡಿದರ ಇಳಿಕೆ ಕ್ರಮಕ್ಕೆ ಮುಂದಾಗಿದ್ದು, ಇದೀಗ 1 ಕೋಟಿಗಿಂತ ಕಡಿಮೆ ಹಣ ಠೇವಣಿ ಇಟ್ಟಿರುವ  ಉಳಿತಾಯಖಾತೆ ಗ್ರಾಹಕ ಬಡ್ಡಿದರದಲ್ಲಿ 0.5ರಷ್ಟು ಕಡಿತ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com