ಅನಿಯಮಿತ ಧ್ವನಿ ಕರೆ, ದಿನಕ್ಕೆ 2 ಜಿಬಿ ಡಾಟಾ: ಬಿಎಸ್ಎನ್ಎಲ್ ಸಿಕ್ಸರ್ ಆಫರ್

ಬಿಎಸ್ಎನ್ಎಲ್ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸ ಆಫರ್ ನ್ನು ಪರಿಚಯಿಸಿದೆ. ಸಿಕ್ಸರ್ ಅಥವಾ 666 ಆಫರ್ ನಲ್ಲಿ ಪ್ರೀಪೇಯ್ಡ್ ಗ್ರಾಹಕರು ಅನಿಯಮಿತ ಧ್ವನಿ ಕರೆ ಹಾಗೂ 2 ಜಿಬಿ ಡಾಟಾ ಪಡೆಯಬಹುದಾಗಿದೆ.
ಬಿಎಸ್ಎನ್ಎಲ್
ಬಿಎಸ್ಎನ್ಎಲ್
ನವದೆಹಲಿ: ಬಿಎಸ್ಎನ್ಎಲ್ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸ ಆಫರ್ ನ್ನು ಪರಿಚಯಿಸಿದೆ. ಸಿಕ್ಸರ್ ಅಥವಾ 666 ಆಫರ್ ನಲ್ಲಿ ಪ್ರೀಪೇಯ್ಡ್ ಗ್ರಾಹಕರು ಅನಿಯಮಿತ ಧ್ವನಿ ಕರೆ ಹಾಗೂ 2 ಜಿಬಿ ಡಾಟಾ ಪಡೆಯಬಹುದಾಗಿದೆ. 
ಯಾವುದೇ ಮೊಬೈಲ್ ನೆಟ್ವರ್ಕ್ ಗೆ ಅನಿಯಮಿತ ಕರೆ ಮಾಡಬಹುದಾಗಿದ್ದು, 6೦ ದಿನಗಳವರೆಗೆ ಡಾಟಾ ಸೇವೆಗಳನ್ನು ಪಡೆಯಬಹುದಾಗಿದೆ. ಸಿಕ್ಸರ್ ಆಫರ್ ನ ಹೊರತಾಗಿಯೂ ಬಿಎಸ್ಎನ್ಎಲ್ ಪ್ರೀಪೇಯ್ಡ್ ಗ್ರಾಹಕರಿಗಾಗಿ ದಿಲ್ ಖೋಲ್ ಕೆ ಬೋಲ್-349, ತ್ರಿಪಲ್ ಎಸಿಇ-333 ಹಾಗೂ ಚೌಕಾ-444 ಆಫರ್ ಗಳನ್ನು ಒದಗಿಸಿದೆ. 
ಕರೆ ಹಾಗೂ ಡಾಟಾ ಬಳಕೆಯ ಟ್ರೆಂಡ್ ಗೆ ಅನುಸಾರವಾಗಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸಲು ಬಿಎಸ್ಎನ್ಎಲ್ ಬದ್ಧವಾಗಿದೆ ಎಂದು ಬಿಎಸ್ಎನ್ಎಲ್ ನ ನಿರ್ದೇಶಕರು ಹೇಳಿದ್ದಾರೆ. ಬಿಎಸ್ಎನ್ಎಲ್ ಇತ್ತೀಚೆಗಷ್ಟೇ ರಂಜಾನ್ ಹಬ್ಬದ ಅಂಗವಾಗಿ 786 ಹಾಗೂ 599 ರೂಪಾಯಿಗಳ ವಿಶೇಷ ಕಾಂಬೋ ವೊಚರ್ ಗಳನ್ನು ಪರಿಚಯಿಸಿತ್ತು.  ಇದಕ್ಕೂ ಮುನ್ನ 444 ರೂಪಾಯಿಗಳಿಗೆ 90 ದಿನಗಳ ವರೆಗೆ ಪ್ರತಿ ದಿನ 4 ಜಿಬಿಯಂತೆ ಡಾಟಾ ಬಳಕೆ ಸೌಲಭ್ಯ ಒದಗಿಸಿತ್ತು. ಇದಕ್ಕೂ ಮುನ್ನ  ತ್ರಿಪಲ್ ಎಸಿಇ-333 ಆಫರ್ ನ್ನು ಪರಿಚಯಿಸಿದ್ದ ಬಿಎಸ್ಎನ್ಎಲ್ ಪ್ರತಿ ದಿನಕ್ಕೆ 3 ಜಿಬಿಯಂತೆ 90 ದಿನಗಳ ವರೆಗೆ ಡಾಟಾ ಬಳಕೆ ಸೌಲಭ್ಯ ನೀಡಿತ್ತು. 
ಜಿಯೋಗೆ ಪರ್ಯಾಯವಾಗಿ ಬಿಎಸ್ಎನ್ಎಲ್ ಸಹ ಆಕರ್ಷಕ ಆಫರ್ ಗಳನ್ನು ಪರಿಚಯಿಸುತ್ತಿದ್ದು, ಅನಿಯಮಿತ ಧ್ವನಿ ಕರೆ, ದಿನಕ್ಕೆ 2 ಜಿಬಿ ಡಾಟಾ ಸಿಗುವ ಬಿಎಸ್ಎನ್ಎಲ್ ಸಿಕ್ಸರ್ ಆಫರ್ ನ್ನು ಪರಿಚಯಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com