ಜಿಎಸ್‍ಟಿ ಎಫೆಕ್ಟ್: ಕೆಲ ಮಾರುತಿ ಸುಜುಕಿ ವಾಹನಗಳ ಬೆಲೆ ಇಳಿಕೆ!

ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಯಾದ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಭಾರತ(ಎಂಎಸ್ಐ) ಕೆಲವೊಂದು ಕಾರುಗಳ ಬೆಲೆಯನ್ನು ಕಡಿಮೆ ಮಾಡಿದೆ...
ಮಾರುತಿ
ಮಾರುತಿ
ನವದೆಹಲಿ: ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಯಾದ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಭಾರತ(ಎಂಎಸ್ಐ) ಕೆಲವೊಂದು ಕಾರುಗಳ ಬೆಲೆಯನ್ನು ಕಡಿಮೆ ಮಾಡಿದೆ. 
ಜಿಎಸ್ಟಿ ಜಾರಿಯಿಂದ ಗ್ರಾಹಕರಿಗೆ ಲಾಭವಾಗುತ್ತಿದ್ದು ಮಾರುತಿ ಸುಜುಕಿ ಕೆಲ ಕಾರುಗಳ ಬೆಲೆಯ ಮೇಲೆ ಶೇಖಡ 3ರಷ್ಟು ಕಡಿಮೆ ಮಾಡಿದೆ ಎಂದು ಮಾರುತಿ ಸುಜುಕಿ ಭಾರತ(ಎಂಎಸ್ಐ) ಪ್ರಕಟಣೆಯಲ್ಲಿ ತಿಳಿಸಿದೆ. 
ಮಾರುತಿ ಷೋರೂಂಗಳಲ್ಲಿ ಮಾರುತಿ ಸುಜುಕಿ ವಾಹನಗಳ ಮೇಲೆ ಶೇಖಡ 3ರಷ್ಟು ಬೆಲೆ ಕಡಿಮೆ ಮಾಡಲಾಗಿದ್ದು ದೇಶಾದಾದ್ಯಂತ ಇರುವ ಷೋರೂಂಗಳಲ್ಲಿ ಅಲ್ಲಿನ ವ್ಯಾಟ್ ಅನ್ವಯ ಬೆಲೆ ಇಳಿಕೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com