ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ; ಸೆನ್ಸೆಕ್ಸ್ ದಾಖಲೆ ಅಂಶಗಳ ಏರಿಕೆ!

ಪಂಚ ರಾಜ್ಯಗಳ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಪಕ್ಷ ಅಭೂತಪೂರ್ವ ಗೆಲುವ ಸಾಧಿಸುವುದರೊಂದಿಗೆ ಸೆನ್ಸೆಕ್ಸ್ ಬರೊಬ್ಬರಿ 600 ಅಂಕಗಳ ದಾಖಲೆ ಪ್ರಮಾಣದ ಏರಿಕೆ ಕಂಡಿದ್ದು, ರುಪಾಯಿ ಮೌಲ್ಯ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಪಕ್ಷ ಅಭೂತಪೂರ್ವ ಗೆಲುವ ಸಾಧಿಸುವುದರೊಂದಿಗೆ ಸೆನ್ಸೆಕ್ಸ್ ಬರೊಬ್ಬರಿ 600 ಅಂಕಗಳ ದಾಖಲೆ ಪ್ರಮಾಣದ ಏರಿಕೆ ಕಂಡಿದ್ದು, ರುಪಾಯಿ  ಮೌಲ್ಯ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಪ್ರಮುಖವಾಗಿ ಆಡಳಿತಾರೂಢ ಬಿಜೆಪಿ ಪಕ್ಷ 15 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆ ಮಾಡುತ್ತಿರುವುದು ಹೂಡಿಕೆದಾರರ ಹುಮ್ಮಸ್ಸು ಹೆಚ್ಚಿಸಿದಂತಿದೆ. ಇದೇ ಕಾರಣಕ್ಕೆ ಭಾರತೀಯ ಷೇರುಮಾರುಕಟ್ಟೆಗೆ ವ್ಯಾಪಕ  ಬಂಡವಾಳ ಹರಿದುಬರುತ್ತಿದ್ದು, ಬರೊಬ್ಬರಿ 600 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 29,561.93 ಅಂಕಗಳಿಗೇರಿದೆ. ನಿಫ್ಟಿ ಕೂಡ ಬರೊಬ್ಬರಿ 188 ಅಂಕಗಳ ಏರಿಕೆಯೊಂದಿಗೆ  9 ಸಾವಿರ ಗಡಿ ದಾಟಿದ್ದು, 9,122 ಅಂಕಗಳಿಗೇರಿದೆ.

ಇನ್ನು ರುಪಾಯಿ ಮೌಲ್ಯ ಕೂಡ ಬರೊಬ್ಬರಿ 43 ಪೈಸೆಗಳಷ್ಟು ಏರಿಕೆಯಾಗಿದ್ದು, ಅಮೆರಿಕ ಡಾಲರ್ ಎದುರು ರುಪಾಯಿ ಮೌಲ್ಯ 66.17ಗೇರಿದೆ. ಶುಕ್ರವಾರ ಮಾರುಕಟ್ಟೆ ಅಂತ್ಯಕ್ಕೆ ಇದೇ ರುಪಾಯಿ ಮೌಲ್ಯ ಪ್ರತೀ ಡಾಲರ್ ಗೆ  66.60ರುಗಳಷ್ಟಿತ್ತು.

ಸ್ಥಿರ ಸರ್ಕಾರ ಮತ್ತು ಉತ್ತಮ ಆಡಳಿತದ ಭರವಸೆ ಬಂಡವಾಳದಾರರನ್ನು ಆಕರ್ಷಿಸುತ್ತಿದ್ದು, ಬಿಎಸ್ ಇ ಬಂಡವಾಳದ ಹರಿವು 1.31 ಲಕ್ಷ ಕೋಟಿಗೇರಿದೆ ಎಂದು ಆರ್ಥಿಕ ತಜ್ಞರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com