ಮೊದಲೇ ಹೇಳಿದಂತೆ ನಮ್ಮದು ವ್ಯವಸ್ಥಿತ ಸಮಾಜವಲ್ಲ ಹೀಗಾಗಿ ಯಾವುದೇ ವಿಷಯದ ನಿಖರತೆ ತಿಳಿಯುವುದೇ ಇಲ್ಲ. ಆರು ತಿಂಗಳು, ಆರು ವರ್ಷ ಇವೆಲ್ಲಾ ಸಂಖ್ಯೆಯಷ್ಟೇ. ನಮ್ಮ ಸ್ಟಾಟಿಸ್ಟಿಕ್ಸ್ ಪ್ರತಿ ಹಂತದಲ್ಲೂ ಪೊಳ್ಳು. ಅದು ಕೇವಲ ಅಂದಾಜು ಅಷ್ಟೇ. ಸರಕಾರ ಡಿಮಾನಿಟೈಸೇಷನ್ ಮಾಡಲು ಏನು ಮುಖ್ಯ ಕಾರಣ ಕೊಟ್ಟಿತ್ತೋ ಅವುಗಳಲ್ಲಿ ಮುಕ್ಕಾಲು ಪಾಲು ತಮ್ಮ ಕಾರಣವನ್ನ ಸಮರ್ಥಿಸಿಕೊಳ್ಳುವಲ್ಲಿ ವಿಫಲವಾಗಿವೆ. ಇಷ್ಟು ದೊಡ್ಡ ದೇಶದಲ್ಲಿ ರಾತ್ರೋರಾತ್ರಿ ಇಷ್ಟು ದೊಡ್ಡ ಬದಲಾವಣೆಯನ್ನ ಮಾಡಿ ದೇಶದಲ್ಲಿ ದಂಗೆ, ರಕ್ತಪಾತ ಆಗಿಲ್ಲ ಎನ್ನುವುದಷ್ಟೆ ಸಮಾಧಾನ ಪಡುವ ವಿಷಯ. ದೇಶದ ಒಳಿತಿಗಾಗಿ ಎಂದು ಹೇಳಿ ವಿಷ ಕೊಟ್ಟರೊ ನಗುತ್ತಾ ನಾವು ಕುಡಿಯಬಲ್ಲೆವು ಮತ್ತು ಹೇಗೋ ಬದುಕಬಲ್ಲೆವು ಎನ್ನುವುದನ್ನ ಭಾರತೀಯರು ಜಗತ್ತಿಗೆ ತೋರಿಸಿದ್ದಾರೆ. ಡಿಮಾನಿಟೈಸೇಷನ್ ಏನೇನೂ ಒಳಿತು ಮಾಡಿತು ಎನ್ನುವ ಪಟ್ಟಿ ಮಾಡುವುದಕ್ಕಿಂತ ಇಡೀ ದೇಶವನ್ನ ದೇಶ ಭಕ್ತಿಯ ಹೆಸರಲ್ಲಿ ಒಗ್ಗೊಡಿಸಬಹುದು ಎನ್ನುವ ವಿಷಯವನ್ನ ತೋರಿಸಿಕೊಟ್ಟಿದೆ. ಅಹ್ ಈ ವಿಷಯದಲ್ಲಿ ನಮ್ಮ ಸ್ಟಾಟಿಸ್ಟಿಕ್ , ಅಂಕಿಅಂಶದಲ್ಲಿ ನಿಖರತೆಯಿದೆ.!