ಭಾರತದ ಮಾರುಕಟ್ಟೆಯಲ್ಲಿ 1.1 ಶತಕೋಟಿ ಡಾಲರ್ ಹೂಡಿಕೆಗೆ ಮುಂದಾದ ಓಲಾ

ಟೆನ್ಸೆಂಟ್ ಹೋಲ್ಡಿಂಗ್ಸ್ ನೇತೃತ್ವದಲ್ಲಿ ತಾನು 1.1 ಶತಕೋಟಿ ಡಾಲರ್ ನಷ್ಟು ಹಣವನ್ನು ಸಂಗ್ರಹಿಸಿದೆ ಮತ್ತು ಇದು ಶೀಘ್ರದಲ್ಲೇ ಇನ್ನೂ 1 ಶತಕೋಟಿ ದಾಲರ್ ............
ಓಲಾ ಸಾಂದರ್ಭಿಕ ಚಿತ್ರ
ಓಲಾ ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಟೆನ್ಸೆಂಟ್ ಹೋಲ್ಡಿಂಗ್ಸ್ ನೇತೃತ್ವದಲ್ಲಿ ತಾನು 1.1 ಶತಕೋಟಿ ಡಾಲರ್ ನಷ್ಟು ಹಣವನ್ನು ಸಂಗ್ರಹಿಸಿದೆ ಮತ್ತು ಇದು ಶೀಘ್ರದಲ್ಲೇ ಇನ್ನೂ 1 ಶತಕೋಟಿ ದಾಲರ್ ಹಣವನ್ನು ಸಂಗ್ರಹ ಮಾಡಲಿದೆ ಎಂದು ಅಪ್ಲಿಕೇಶನ್-ಆಧಾರಿತ ಸಾರಿಗೆ ಸಂಸ್ಥೆ ಓಲಾ ಹೇಳಿಕೊಂಡಿದೆ.
ಇದಾಗಲೇ ಪ್ರಮುಖ  ಹೂಡಿಕೆದಾರ ಎನಿಸಿರುವ ಸಾಫ್ಟ್ ಬ್ಯಾಂಕ್ ಮತ್ತು ಅದರ ಇತರ ಅಮೆರಿಕನ್  ಮೂಲದ ಹಣಕಾಸು ಹೂಡಿಕೆದಾರರು ಸಹ ಈ ಬಾರಿ ಹೂಡಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ಓಲಾ ತಿಳಿಸಿದೆ. 
ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಚೀನಾದ ಒಂದು ಪ್ರಮುಖ ಇಂಟರ್ನೆಟ್ ಸಂಸ್ಥೆಯಾಗಿದ್ದು , ಇದು ಓಲಾ  ಭಾರತದಲ್ಲಿ ಇನ್ನಷ್ಟು ಉತ್ತಮ ಸೇವೆ ನೀದಲು ಸಹಾಯ ಒದಗಿಸುತ್ತದೆ ಎನ್ನಲಾಗಿದೆ.
"ಸಾರಿಗೆ ಮತ್ತು ಸಂಪರ್ಕ ಕ್ಷೇತ್ರ್ ಜಾಗತಿಕವಾಗಿ ದೊಡ್ಡ ಬದಲಾವಣೆಯನ್ನು ಕಂಡಿದೆ. ಭಾರತದಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಭವಿಷ್ಯದ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಮಹತ್ವಾಕಾಂಕ್ಷೆಯಾಗಿದ್ದು, ಅದು ದೇಶದಲ್ಲಿ ಸಾರಿಗೆ ವ್ಯವಸ್ಥೆಯ  ವೇಗವನ್ನು ಹೆಚ್ಚಿಸುತ್ತದೆ ಎಂದು ಓಲಾ ಸಹ ಸಂಸ್ಥಾಪಕ ಮತ್ತು ಸಿಇಒ ಭಾವಿಶ್ ಅಗರ್ವಾಲ್ ಹೇಳಿದ್ದಾರೆ.
ಹೊಸ ಹೂಡಿಕೆಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಬಲಪಡಿಸಲು ಮತ್ತು ಪ್ರತಿಸ್ಪರ್ಧಿ ಊಬರ್ ನ್ನು ಹಿಮ್ಮೆಟ್ಟಿಸಲು ಈ ಹೂಡಿಕೆ ಯೋಜನೆ ರೂಪಿಸಲಾಗಿದೆ, ಭಾರತದ ವಿಶಿಷ್ಟ ಸಾರಿಗೆ ಅಗತ್ಯತೆಗಳನ್ನು ಪೂರೈಸಲು ತಂತ್ರಜ್ಞಾನ ಮತ್ತು ನವೀನ ಕಾರ್ಯತಂತ್ರದ ಹೂಡಿಕೆಗಳನ್ನು ಇದು ಒಳಗೊಂಡಿದೆ ಎಂದು ಓಲಾ ಹೇಳಿಕೆಯಲ್ಲಿ ತಿಳಿಸಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com