

ನವದೆಹಲಿ: ಶುಕ್ರವಾರ ಮತ್ತೆ ಇಂಧನ ಬೆಲೆ ಏರಿಕೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 78 ರೂಪಾಯಿ 52 ಪೈಸೆ ಮತ್ತು ಡೀಸೆಲ್ ಗೆ 70 ರೂಪಾಯಿ 21 ಪೈಸೆಯಷ್ಟಾಗಿದೆ.ನಿನ್ನೆ ಪೆಟ್ರೋಲ್ ದರ ಲೀಟರ್ ಗೆ 22 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 28 ಪೈಸೆಯಷ್ಟು ಹೆಚ್ಚಾಗಿತ್ತು.
ಮುಂಬೈಯಲ್ಲಿ ಪೆಟ್ರೋಲ್ ದರ 85 ರೂಪಾಯಿ 72 ಪೈಸೆಯಿಂದ 85 ರೂಪಾಯಿ 93 ಪೈಸೆಯಷ್ಟಾಗಿತ್ತು ಮತ್ತು ಡೀಸೆಲ್ ದರ ಲೀಟರ್ ಗೆ 74 ರೂಪಾಯಿ 24 ಪೈಸೆಯಿಂದ 74 ರೂಪಾಯಿ 54 ಪೈಸೆಯಷ್ಟಾಗಿದೆ.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಲೀಟರ್ ಗೆ 80 ರೂಪಾಯಿ 89 ಪೈಸೆಯಷ್ಟಾಗಿದೆ.