ವಾಣಿಜ್ಯ

ಐಡಿಯಾ-ವೋಡಫೋನ್ ವಿಲೀನ ಪ್ರಕ್ರಿಯೆ ಪೂರ್ಣ: ಏರ್ ಟೆಲ್ ನಂ.1 ಸ್ಥಾನಕ್ಕೆ ಕುತ್ತು!

ಐಡಿಯಾ ಸೆಲ್ಯುಲರ್ ಹಾಗೂ ವೋಡಫೋನ್ ಇಂಡಿಯಾ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟಾರೆ 408 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಭಾರತದ ದೊಡ್ಡ ಟೆಲಿಕಾಂ ಸೇವಾ ಪೂರೈಕೆ ಸಂಸ್ಥೆಯಾಗಿದೆ.

ಐಡಿಯಾ-ವೋಡಫೋನ್ ವಿಲೀನ ಪ್ರಕ್ರಿಯೆ ಪೂರ್ಣ: ಏರ್ ಟೆಲ್ ನಂ.1 ಸ್ಥಾನಕ್ಕೆ ಕುತ್ತು!
ಐಡಿಯಾ-ವೋಡಫೋನ್ ವಿಲೀನ ಪ್ರಕ್ರಿಯೆ ಪೂರ್ಣ
Published On :
ಐಡಿಯಾ ಸೆಲ್ಯುಲರ್ ಹಾಗೂ ವೋಡಫೋನ್ ಇಂಡಿಯಾ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟಾರೆ 408 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಭಾರತದ ದೊಡ್ಡ ಟೆಲಿಕಾಂ ಸೇವಾ ಪೂರೈಕೆ ಸಂಸ್ಥೆಯಾಗಿದೆ. 
ವೋಡಫೋನ್ ಐಡಿಯಾ  ಲಿಮಿಟೆಡ್ ಎಂಬ ಹೆಸರಿನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸಂಸ್ಥೆಯಲ್ಲಿ 12 ನಿರ್ದೇಶಕರಿದ್ದು, ಕುಮಾರ್ ಮಂಗಲಂ ಬಿರ್ಲಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ಜಂಟಿ ಹೇಳಿಕೆಯಿಂದ ತಿಳಿದುಬಂದಿದೆ. ಭಾರತ ಆದಾಯ ಮಾರುಕಟ್ಟೆಯಲ್ಲಿ ಶೇ.32.2 ರಷ್ಟನ್ನು ಐಡಿಯಾ-ವೋಡಫೋನ್ ಹೊಂದಿರಲಿದ್ದು, 9 ಟೆಲಿಕಾಂ ಸಂಸ್ಥೆಗಳ ಪೈಕಿ ಅಗ್ರಸ್ಥಾನ ಹೊಂದಿರಲಿವೆ ಎಂದು ವೋಡಫೋನ್ ಐಡಿಯಾ ಲಿಮಿಟೆಡ್ ಹೇಳಿದೆ. 
ಪ್ರಸ್ತುತ ಭಾರ್ತಿ ಏರ್ಟೆಲ್ ನಂ.1 ಸ್ಥಾನದಲ್ಲಿದ್ದು ಈಗ ಆ ಸ್ಥಾನವನ್ನು ವೋಡಫೋನ್ ಐಡಿಯಾ ಲಿ. ಪಡೆದುಕೊಳ್ಳಲಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.