ನವದೆಹಲಿ: ಜಿಡಿಪಿ ಡಾಟ ಸಂಭ್ರಮಿಸುತ್ತಿರುವ ಬಿಜೆಪಿ ವಿರುದ್ಧ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಲೇವಡಿ ಮಾಡಿದ್ದಾರೆ.
ಮೊದಲನೇ ತ್ರೈಮಾಸಿಕದ ಜಿಡಿಪಿಗಿಂತ 2 ನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ಶೇ.1 ರಷ್ಟು ಕಡಿಮೆಯಾಗಿದೆ. ಈಗ ಜಿಡಿಪಿ ಬೆಳವಣಿಗೆ ಕುಸಿದಿರುವುದು ಕಳೆದ ಮೂರು ತಿಂಗಳ ಹಿಂದೆ ಜಿಡಿಪಿ ಏರಿಕೆಯಾದಾಗ ಇದ್ದ ಬಿಜೆಪಿಯ ಸಂಭ್ರಮಾಚರಣೆಯನ್ನು ಅನುಮೋದಿಸುವಂತಿಲ್ಲ ಎಂದು ಚಿದಂಬರಂ ಹೇಳಿದ್ದಾರೆ.
ಇನ್ನು ಮೂರು ಹಾಗೂ ನಾಲ್ಕನೇ ತ್ರೈಮಾಸಿಕ ವರದಿಯ ಬಗ್ಗೆಯೂ ಭವಿಷ್ಯ ನುಡಿದಿರುವ ಚಿದಂಬರಂ, 3-4 ನೇ ತ್ರೈಮಾಸಿಕದಲ್ಲೂ ಜಿಡಿಪಿ ಬೆಳವಣಿಗೆ ಇದೇ ರೀತಿಯಲ್ಲಿರುತ್ತದೆ ಎಂದು ಹೇಳಿದ್ದಾರೆ.