ಈಗ ಎಲ್ಲೆಲ್ಲೂ ಬಿಟ್ ಕಾಯಿನ್ ಗಳದ್ದೇ ಸುದ್ದಿ. ಡಿಜಿಟಲ್ ಕರೆನ್ಸಿಯಾದ ಬಿಟ್ ಕಾಯಿನ್ ಗಳಲ್ಲಿ ಹೂಡಿಕೆ ಮಾಡಬಹುದೇ?, ಮಾಡಬಹುದಾದರೆ ಹೇಗೆ ಮಾಡಬಹುದು, ಇದರ ಸಾಧಕ-ಬಾಧಕಗಳೇನು ಎಂಬಿತ್ಯಾದಿ ಪ್ರಶ್ನೆಗಳು ಬಹುತೇಕ ಮಂದಿಯಲ್ಲಿ.
ಇದು ನಮ್ಮ ದೇಶದ ಸಾಂಪ್ರದಾಯಿಕ ಕರೆನ್ಸಿಗಳಿಗಿಂತ ತೀರಾ ಭಿನ್ನವಾಗಿರುವುದರಿಂದ ಇದರಲ್ಲಿ ಹೂಡಿಕೆ ಮಾಡುವುದು ಬಹುತೇಕ ಮಂದಿಗೆ ಅರ್ಥವಾಗುವುದಿಲ್ಲ. ಡಿಜಿಟಲ್ ವ್ಯವಹಾರ ಭಾರತ ದೇಶದಲ್ಲಿ ಇತ್ತೀಚೆಗಷ್ಟೆ ಜನಪ್ರಿಯವಾಗುತ್ತಿರುವುದರಿಂದ ಬಿಟ್ ಕಾಯಿನ್ ಇನ್ನೂ ಕಾಲು ಭಾಗದಷ್ಟು ಜನರಿಗೆ ತಲುಪಿಲ್ಲ.
ಆದರೆ ಬಿಟ್ ಕಾಯಿನ್ ಇತ್ತೀಚೆಗೆ ಜನಪ್ರಿಯವಾಗುತ್ತಿರುವುದರಿಂದ ಹಲವು ಮಂದಿ ಇದನ್ನು ಖರೀದಿಸುವ ಕುತೂಹಲ ಹೊಂದಿದ್ದಾರೆ. ಹಾಗಾದರೆ ಹೂಡಿಕೆ ಮಾಡುವುದು ಹೇಗೆ, ಅದರ ವಿಧಾನಗಳೇನು ಎಂಬ ಸಂದೇಹಗಳಿಗೆ ಬಿಟ್ ಬಿಎನ್ಎಸ್ ಉತ್ತರ ಕೊಡಲು ಸಹಾಯ ಮಾಡುತ್ತದೆ.
ಬಿಟ್ ಕಾಯಿನ್ ನ ಸಂಕ್ಷಿಪ್ತ ರೂಪ ಬಿಟಿಸಿ. ಇದು ಸಂಪೂರ್ಣ ಆನ್ ಲೈನ್ ವ್ಯವಹಾರ.
ಭಾರತದಲ್ಲಿ ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಬಿಟ್ ಕಾಯಿನ್ ಗಳನ್ನು ಬಿಟ್ ಬಿಎನ್ಎಸ್ ಮೂಲಕ ಖರೀದಿಸಬಹುದು. ಬಿಟ್ ಕಾಯಿನ್ ಖರೀದಿಸಲಿಚ್ಛಿಸುವವರು ಬಿಟ್ ಬಿಎನ್ಎಸ್ ಖಾತೆಯನ್ನು ತೆರೆಯಬೇಕು.
ಬಿಟ್ ಬಿಎನ್ಎಸ್.ಕಾಂ ಎಂಬ ವೆಬ್ ಸೈಟ್ ಗೆ ಭೇಟಿ ಮಾಡಿ ರಿಜಿಸ್ಟರ್ ನೌ ಎಂಬಲ್ಲಿ ದಾಖಲಾತಿ ಮಾಡಿಕೊಳ್ಳಬೇಕು.ನಂತರ ಅಲ್ಲಿ ನಮ್ಮ ವಿವರಗಳಾದ ಮೊದಲ ಹೆಸರು, ಹೆಸರು, ಯೂಸರ್ ನೇಮ್, ಇಮೇಲ್ ವಿಳಾಸ, ಪಾಸ್ ವರ್ಡ್ ಮತ್ತು ಫೋನ್ ನಂಬರ್ ನ್ನು ನೀಡಬೇಕು.
ನಂತರ ಅಲ್ಲಿರುವ ನಿಯಮ ಮತ್ತು ಷರತ್ತುಗಳನ್ನು ಓದಿಕೊಳ್ಳಬೇಕು.
ನಂತರ ಪಾನ್ ಕಾರ್ಡು? ಆಧಾರ್ ಕಾರ್ಡು ಸಂಖ್ಯೆಯನ್ನು ಅಪ್ ಲೋಡ್ ಮಾಡಬೇಕು. ಕೆವೈಸಿ ನಾರ್ಮ್ಸ್ ಗಳ ಪ್ರಕ್ರಿಯೆ ಮುಗಿಯಲು 7 ಕಚೇರಿ ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತದೆ. ಇವಿಷ್ಟು ಪ್ರಕ್ರಿಯೆಗಳು ಮೊದಲ ಹಂತವಾಗಿದೆ.
ಎರಡನೇ ಹಂತದಲ್ಲಿ ಕೆವೈಸಿ ಪ್ರಕ್ರಿಯೆ ಮುಗಿದ ನಂತರ ನೆಫ್ಟ್/ ಆರ್ ಟಿಜಿಎಸ್/ ಐಎಮ್ ಪಿಎಸ್ ವರ್ಗಾವಣೆ ಮೂಲಕ ಬಿಟ್ ಬಿಎನ್ಎಸ್ ನಲ್ಲಿ ಹಣಗಳನ್ನು ಠೇವಣಿ ಮಾಡಬೇಕು. ಹೂಡಿಕೆದಾರರು ಕನಿಷ್ಠ 1ರೂಪಾಯಿಯಿಂದ 25 ಲಕ್ಷಗಳವರೆಗೆ ಹಣ ಹೂಡಿಕೆ ಮಾಡಬಹುದು.
ಪ್ರಮುಖ ಅಂಶಗಳು: ಬಿಟ್ ಬಿಎನ್ಎಸ್ ಮುಖಾಂತರ ಬಿಟ್ ಕಾಯಿನ್ ಮಾರಾಟ ಮಾಡಲು ಇಚ್ಛಿಸುವವರು ಕನಿಷ್ಠ 2,000 ಠೇವಣಿ ಮಾಡಬೇಕು.
ಬಿಟ್ ಬಿಎನ್ಎಸ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ ನಂತರ ಬಿಟ್ ಕಾಯಿನ್ ಖರೀದಿಸಲು ಸಾಧ್ಯವಾಗುತ್ತದೆ.