ಖಾಸಗಿ ಬ್ಯಾಂಕ್ ಗಳಲ್ಲಿ ಶೇ.100 ರಷ್ಟು ಎಫ್ ಡಿಐ ನಿರೀಕ್ಷೆ ಬ್ಯಾಂಕ್ ಷೇರು ಏರಿಕೆ

ಬ್ಯಾಂಕಿಂಗ್ ಕ್ಷೇತ್ರಕ್ಕೆ ಜ.18, ಶುಭ ಗುರುವಾರ! ಹೌದು, ಖಾಸಗಿ ಬ್ಯಾಂಕ್ ಗಳಲ್ಲಿ ಶೇ.100 ರಷ್ಟು ಎಫ್ ಡಿಐ ಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಷೇರುಗಳು ಏರಿಕೆ ಕಂಡಿವೆ.
ಖಾಸಗಿ ಬ್ಯಾಂಕ್ ಗಳಲ್ಲಿ ಶೇ.100 ರಷ್ಟು ಎಫ್ ಡಿಐ ನಿರೀಕ್ಷೆ ಬ್ಯಾಂಕ್ ಷೇರು ಏರಿಕೆ
ಖಾಸಗಿ ಬ್ಯಾಂಕ್ ಗಳಲ್ಲಿ ಶೇ.100 ರಷ್ಟು ಎಫ್ ಡಿಐ ನಿರೀಕ್ಷೆ ಬ್ಯಾಂಕ್ ಷೇರು ಏರಿಕೆ
ಮುಂಬೈ: ಬ್ಯಾಂಕಿಂಗ್ ಕ್ಷೇತ್ರಕ್ಕೆ ಜ.18, ಶುಭ ಗುರುವಾರ! ಹೌದು, ಖಾಸಗಿ ಬ್ಯಾಂಕ್ ಗಳಲ್ಲಿ ಶೇ.100 ರಷ್ಟು ಎಫ್ ಡಿಐ ಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಷೇರುಗಳು ಏರಿಕೆ ಕಂಡಿವೆ. 
ಎಸ್&ಪಿ ಬಿಎಸ್ಇ ಬ್ಯಾಂಕಿಂಗ್ ಇಂಡೆಕ್ಸ್ ನ ಷೇರುಗಳು ಶೇ.1.64 ರಷ್ಟು ಏರಿಕೆ ಕಂಡಿದ್ದು, ಅಂದರೆ 500 ಪಾಯಿಂಟ್ ಗಳಷ್ಟು ಏರಿಕೆ ಕಂಡಿದ್ದು, ಪ್ರಮುಖ ಖಾಸಗಿ ಬ್ಯಾಂಕ್ ಗಳ ಷೇರುಗಳು ಏರಿಕೆಯಾಗಿವೆ. 
ಮಧ್ಯಾಹ್ನ 1:30 ರ ವೇಳೆಗೆ ಯೆಸ್ ಬ್ಯಾಂಕ್ ಷೇರುಗಳು ಶೇ.2.99 ರಷ್ಟು ಏರಿಕೆಯಾಗಿತ್ತು. ನಂತರದ ಸ್ಥಾನದಲ್ಲಿ ಹೆಚ್ ಡಿಎಫ್ ಸಿ ಷೇರುಗಳು (ಶೇ.2.79 ಏರಿಕೆ), ಇಂಡಸ್ ಲ್ಯಾಂಡ್ ಬ್ಯಾಂಕ್ (ಶೇ. 2.01 ರಷ್ಟು) ಐಸಿಐಸಿಐ ಬ್ಯಾಂಕ್ (ಶೇ.1.84 ರಷ್ಟು) ಕೋಟಕ್ ಬ್ಯಾಂಕ್ (ಶೇ.1.28 ರಷ್ಟು) ಆಕ್ಸಿಸ್ ಬ್ಯಾಂಕ್ ನ ಷೇರುಗಳು (ಶೇ.0.47 ರಷ್ಟು) ಏರಿಕೆಯಾಗಿವೆ.   
ಇನ್ನು ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಷೇರುಗಳೂ ಸಹ ಶೇ.0.88 ರಷ್ಟು ಏರಿಕೆಯಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com