ಮುಂಬೈ: ಬಜೆಟ್ ಮಂಡನೆಗೆ ಮುನ್ನ ಏರಿಕೆ ಕಂಡುಬಂದಿದ್ದ ಸೆನ್ಸೆಕ್ಸ್ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಬಜೆಟ್ ಮಂಡಿಸಿದ ನಂತರ 439 ಅಂಕ ಇಳಿಕೆ ಕಂಡುಬಂದಿದೆ..ಗ್ರಾಹಕ ಬಾಳಿಕೆ ವಸ್ತುಗಳು, ಲೋಹಗಳು ಮತ್ತು ಆರೋಗ್ಯದ ವಲಯದ ಷೇರುಗಳ ಮಾರಾಟದಲ್ಲಿ ತೀವ್ರ ಒತ್ತಡ ಕಂಡುಬಂತು..ಇಂದು ಮಧ್ಯಾಹ್ನ 12.16ರ ವೇಳೆಗೆ ನಿಫ್ಟಿ 50 ಅಂಕ ಇಳಿಕೆ ಕಂಡುಬಂದರೆ, ಬಿಎಸ್ಇ ಸೆನ್ಸೆಕ್ಸ್ 36,000 ವಹಿವಾಟುಗಳಿಂದ 35,880.47 ಅಂಕಗಳಷ್ಟು 84.55 ಅಂಕ ಇಳಿಕೆ ಕಂಡುಬಂದಿದೆ..ಇತ್ತೀಚಿನ ವರದಿಯಂತೆ ಬಿಎಸ್ಇ ಸೆನ್ಸೆಕ್ಸ್ 75 ಅಂಕ ಇಳಿಕೆ ಕಂಡು 35,891ರಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 32 ಅಂಕ ಏರಿಕೆ ಕಂಡುಬಂದು 11,060ರಲ್ಲಿ ವಹಿವಾಟು ನಡೆಸಿದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics