ಡಾಲರ್ ಎದುರು ಮತ್ತೆ ಚೇತರಿಕೆ ಕಂಡ ರೂಪಾಯಿ ಮೌಲ್ಯ, 29 ಪೈಸೆಯಷ್ಟು ಏರಿಕೆ!

ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯ ಮತ್ತೆ ಏರಿಕೆಯಾಗಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ 29 ಪೈಸೆಯಷ್ಟು ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯ ಮತ್ತೆ ಏರಿಕೆಯಾಗಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ 29 ಪೈಸೆಯಷ್ಟು ಏರಿಕೆಯಾಗಿದೆ.
ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ 29ಪೈಸೆಯಷ್ಟು ಏರಿಕೆಯಾಗಿ 72.60 ರೂ ನಲ್ಲಿ ವಹಿವಾಟು ನಡೆಸುತ್ತಿದೆ. ಪ್ರಮುಖವಾಗಿ ಇಂದಿನ ಬೆಳವಣಿಗೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರ ಇಳಿಕೆಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಅಂತೆಯೇ ಭಾರತೀಯ ಮಾರುಕಟ್ಟೆಗೆ ವಿದೇಶ ಬಂಡವಾಳದ ಹರಿವು ಹೆಚ್ಚಾಗುತ್ತಿರುವುದೂ ಮತ್ತು ಅಮೆರಿಕ ಮಾರುಕಟ್ಟೆಯಲ್ಲಿನ ನೀರಸ ವಹಿವಾಟು ಕಾರಣ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com