ದೇಶದ ಪ್ರಮುಖ ಮೆಟ್ರೋ ನಗರಳಲ್ಲಿ ಪೆಟ್ರೋಲ್ ದರ 40 ರಿಂದ 43 ಪೈಸೆಯಷ್ಟು ಇಳಿಕೆಯಾಗಿದ್ದು, ಡೀಸೆಲ್ ದರ ಕೂಡ 30 ರಿಂದ 43 ಪೈಸೆಯಷ್ಟು ಇಳಿತೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 75. 97ರೂಗೆ ಇಳಿಕೆಯಾಗಿದ್ದು, ಡೀಸೆಲ್ ದರ 70.97 ಕ್ಕೆ ಇಳಿಕೆಯಾಗಿದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲೂ ಪ್ರತೀ ಲೀಟರ್ ಪೆಟ್ರೋಲ್ ದರ 81. 50 ರೂಗಳಿಗೆ ಇಳಿಕೆಯಾಗಿದ್ದು, ಡೀಸೆಲ್ ದರ ಕೂಡ ಪ್ರತೀ ಲೀಟರ್ ಗೆ 74.34ಕ್ಕೆ ಇಳಿಕೆಯಾಗಿದೆ.