ಚೇತರಿಕೆ ಕಂಡುಬಂದ ಸಂವೇದಿ ಸೂಚ್ಯಂಕ; ಡಾಲರ್ ಎದುರು ರೂಪಾಯಿ ಮೌಲ್ಯ 18 ಪೈಸೆ ಏರಿಕೆ

ಬ್ಯಾಂಕು ಮತ್ತು ರಫ್ತುದಾರರು ಅಮೆರಿಕಾದ ಕರೆನ್ಸಿಯ ಮಾರಾಟದಿಂದಾಗಿ ಅಮೆರಿಕಾದ ಡಾಲರ್ ಎದುರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಬ್ಯಾಂಕು ಮತ್ತು ರಫ್ತುದಾರರು ಅಮೆರಿಕಾದ ಕರೆನ್ಸಿಯ ಮಾರಾಟದಿಂದಾಗಿ ಅಮೆರಿಕಾದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 18 ಪೈಸೆ ಏರಿಕೆಯಾಗಿ ಡಾಲರ್ ವೊಂದಕ್ಕೆ ರೂಪಾಯಿ ಬೆಲೆ 73 ರೂಪಾಯಿ 88 ಪೈಸೆಯಷ್ಟಾಗಿದೆ.

ಇದರ ಹೊರತಾಗಿ,ಸಾಗರೋತ್ತರದಲ್ಲಿ ಡಾಲರ್ ಮೌಲ್ಯ ದುರ್ಬಲವಾಗಿರುವುದರಿಂದ ಜಾಗತಿಕ ಕಚ್ಚಾ ತೈಲ ಬೆಲೆ ಮತ್ತು ದೇಶೀಯ ಷೇರು ಮಾರುಕಟ್ಟೆಯಲ್ಲಿ ಅಧಿಕ ಬೆಲೆಯಿಂದಾಗಿ ರೂಪಾಯಿ ಮೌಲ್ಯ ಇಂದು ಏರಿಕೆ ಕಂಡುಬಂತು.

ಇಂದು ಬೆಳಗ್ಗೆ, ವಿದೇಶಿ ವಿನಿಮಯ ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ಸ್ಥಳೀಯ ಕರೆನ್ಸಿ 18 ಪೈಸೆ ಏರಿಕೆ ಕಂಡು 73.88 ಕ್ಕೆ ತಲುಪಿದೆ.ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಸೂಚ್ಯಂಕ ಈ ವರ್ಷ ಶೇಕಡಾ 7.3ರಷ್ಟು ಏರಿಕೆ ಕಂಡುಬಂದಿದ್ದು, ಮುಂದಿನ ವರ್ಷಕ್ಕೆ ಶೇಕಡಾ 7.4ರಷ್ಟು ಎಂದು ತೋರಿಸುತ್ತಿರುವುದು ಕೂಡ ಹೂಡಿಕೆದಾರರಲ್ಲಿ ಉತ್ಸಾಹ ಕಂಡುಬಂದಿದೆ.

ಈ ಮಧ್ಯೆ, ಮುಂಬೈ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ 72 ಅಂಕ ಏರಿಕೆ ಕಂಡುಬಂದು ಶೇಕಡಾ 0.21 ವೃದ್ಧಿಯಾಗಿ 34 ಸಾವಿರದ 546ರಲ್ಲಿ ವಹಿವಾಟು ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com