ಷೇರು ಸೂಚ್ಯಂಕ ಮತ್ತೆ ಪತನ, ಸೆನ್ಸೆಕ್ಸ್ 1100 ಅಂಕ ಕುಸಿದು ತಲ್ಲಣ

ಮುಂಬೈ ಷೇರು ಮಾರುಕಟ್ಟೆ ವ್ಯವಹಾರ ಮತ್ತೆ ದಾಖಲೆಯ ಕುಸಿತ ಕಂಡಿದ್ದು, ಶುಕ್ರವಾರ ಬೆಳಗ್ಗೆ 300 ಅಂಕ ಏರಿಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಮುಂಬೈ ಷೇರು ಮಾರುಕಟ್ಟೆ ವ್ಯವಹಾರ ಮತ್ತೆ ದಾಖಲೆಯ ಕುಸಿತ ಕಂಡಿದ್ದು, ಶುಕ್ರವಾರ ಬೆಳಗ್ಗೆ 300 ಅಂಕ ಏರಿಕೆ ಕಂಡು ಹುಮ್ಮಸ್ಸು ಮೂಡಿಸಿದ್ದ ಮುಂಬೈ ಷೇರು ಸೂಚ್ಯಂಕ, ಮಧ್ಯಾಹ್ನದ ವೇಳೆ ದಿಢೀರ್​ ಕುಸಿತ ಕಂಡು ತಲ್ಲಣ ಸೃಷ್ಟಿಸಿತು.
ಒಂದು ಹಂತದಲ್ಲಿ 1100 ಅಂಕಗಳ ಕುಸಿತ ಕಂಡು, ಸೆನ್ಸೆಕ್ಸ್​ 35,993 ಅಂಶಗಳಿಗೆ ಇಳಿಕೆ ಕಂಡಿತ್ತು. ಬಳಿಕ 600 ಅಂಕ ಚೇತರಿಸಿಕೊಂಡು 36600 ಕ್ಕೆ ಬಂದು ತಲುಪಿತು.  
ಇಂದು ಯೆಸ್​ ಬ್ಯಾಂಕ್​ ಭಾರಿ ನಷ್ಟ ಅನುಭವಿಸಿದ್ದು, ಶೇ. 34ರಷ್ಟು ನಷ್ಟ ಅನುಭವಿಸುವ ಮೂಲಕ ಹೂಡಿಕೆದಾರರಿಗೆ ಬಿಗ್​ ಶಾಕ್​ ನೀಡಿದೆ. 
ಯೆಸ್​ ಬ್ಯಾಂಕ್ ನಿರ್ದೇಶಕ ಹಾಗೂ ಸಿಇಒ ರಾಣಾ ಕಪೂರ್ ಅವರನ್ನು ಸ್ಥಾನದಿಂದ ಕೆಳಗಿಳಿಸುವಂತೆ ಆರ್ ಬಿಐ ಸೂಚಿಸಿದ ಬೆನ್ನಲ್ಲೇ ಯಶ್ ಬ್ಯಾಂಕ್ ಷೇರುಗಳು ಒಂದೇ ದಿನ ಶೇ.34ರಷ್ಟು ಕುಸಿತ ಕಂಡಿದೆ.
ಇನ್ನು ಪಿಎನ್​ಬಿ, ಫೆಡರಲ್​ ಬ್ಯಾಂಕ್​​, ಬ್ಯಾಂಕ್​ ಆಫ್​ ಬರೋಡಾ, ಕೊಟಕ್​ ಬ್ಯಾಂಕ್​, ಎಸ್​​ಬಿಐ ಷೇರುಗಳು ಶೇ. 7.44 ರಷ್ಟು ಕುಸಿತ ಕಂಡವು. ಡಿಎಚ್​ಎಲ್​ಎಫ್​ ಷೇರುಗಳ ಇಂಟರ್​ ಡೇ ಟ್ರೇಡಿಂಗ್​ನಲ್ಲಿ ಶೇ. 50ರಷ್ಟು ಕುಸಿತ ಕಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com