ಮನಮೋಹನ್ ಸಿಂಗ್ ಅವಧಿಯಲ್ಲಿನ ಗರಿಷ್ಠ ಜಿಡಿಪಿ ಅಂಕಿ-ಅಂಶ ಸರ್ಕಾರಿ ವೆಬ್ ಸೈಟ್ ನಿಂದ ಡಿಲೀಟ್!?

ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ವಿವಾದವೊಂದು ಹುಟ್ಟಿಕೊಂಡಿದೆ. 

Published: 01st September 2019 06:18 PM  |   Last Updated: 01st September 2019 06:18 PM   |  A+A-


Modi-Manmohan Singh

ಮೋದಿ-ಮನ್ ಮೋಹನ್ ಸಿಂಗ್

Posted By : Srinivas Rao BV
Source : PTI

ನವದೆಹಲಿ: ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ವಿವಾದವೊಂದು ಹುಟ್ಟಿಕೊಂಡಿದೆ. 

ಯುಪಿಎ ಅವಧಿಯಲ್ಲಿ ದಾಖಲಾಗಿದ್ದ ಗರಿಷ್ಠ ಜಿಡಿಪಿ ಬೆಳವಣಿಗೆ ದರದ ವರದಿಯನ್ನು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ವೆಬ್‌ಸೈಟ್ ನಿಂದ ಡಿಲೀಟ್ ಮಾಡಲಾಗಿದೆ. 

ಎನ್ ಡಿಎ ಸರ್ಕಾರ ಜಿಡಿಪಿ ಲೆಕ್ಕಾಚಾರಕ್ಕೆ ಬೇಸ್ ಇಯರ್ ನ್ನು 2004-05 ರಿಂದ 2010-11 ಕ್ಕೆ ಬದಲಾವಣೆ ಮಾಡಿದೆ. ಹಳೆಯ ವಿಧಾನದಲ್ಲಿ 2004-05 ನ್ನು ಯುಪಿಎ ಸರ್ಕಾರ ಮಾದನಂಡವನ್ನಾಗಿ ಬಳಕೆ ಮಾಡಿತ್ತು. 

ಸಚಿವಾಲಯದ ವರದಿ ವೆಬ್ ಸೈಟ್ ನಲ್ಲಿ ಜು.25 ರಂದು ಪ್ರಕಟವಾಗಿತ್ತು, ಇದರಲ್ಲಿನ ಮಾಹಿತಿಯ ಪ್ರಕಾರ 2006-07 ನೇ ಸಾಲಿನಲ್ಲಿ (ಮನಮೋಹನ್ ಸಿಂಗ್ ಆಡಳಿತಾವಧಿ) ಭಾರತ ಶೇ.10.8 ರಷ್ಟು ಬೆಳವಣಿಗೆ ದಾಖಲಿಸಿತ್ತು. 

2004-14 ರ ಯುಪಿಎ ಅವಧಿಯ ಆರ್ಥಿಕ ಬೆಳವಣಿಗೆ ಅತ್ಯುತ್ತಮವಾದ ಆರ್ಥಿಕ ಬೆಳವಣಿಗೆಯಾಗಿತ್ತು ಎಂಬುದನ್ನು ಕಳೆದ ವಾರ ಉಲ್ಲೇಖಿಸಿದ್ದ ಚಿದಂಬರಂ, ಸತ್ಯ ಜಯಗಳಿಸಿದೆ ಎಂದು ಹೇಳಿದ್ದರು.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp