ಬ್ರೈನ್ಲಿ ಸಂಸ್ಥೆಯ ಹೊಸ ಸಿಪಿಒ ಆಗಿ ರಾಜೇಶ್ ಬೈಸಾನಿ ನೇಮಕ

ಪ್ರಪಂಚದ ಅತಿ ದೊಡ್ಡ ಆನ್‌ಲೈನ್ ಕಲಿಕಾ ವೇದಿಕೆಯಾದ 'ಬ್ರೈನ್ಲಿ' ಸಂಸ್ಥೆಯು ರಾಜೇಶ್ ಬೈಸಾನಿ ಅವರನ್ನು ಮುಖ್ಯ ಉತ್ಪನ್ನ ಅಧಿಕಾರಿ (ಚೀಫ್ ಪ್ರಾಡಕ್ಟ್ ಆಫಿಸರ್ -ಸಿಪಿಒ) ಆಗಿ ನೇಮಕ ಮಾಡಿದೆ. 
ಬ್ರೈನ್ಲಿ ಸಂಸ್ಥೆಯ ಹೊಸ ಸಿಪಿಒ ಆಗಿ ರಾಜೇಶ್ ಬೈಸಾನಿ ನೇಮಕ
ಬ್ರೈನ್ಲಿ ಸಂಸ್ಥೆಯ ಹೊಸ ಸಿಪಿಒ ಆಗಿ ರಾಜೇಶ್ ಬೈಸಾನಿ ನೇಮಕ
Updated on

ಬೆಂಗಳೂರು: ಪ್ರಪಂಚದ ಅತಿ ದೊಡ್ಡ ಆನ್‌ಲೈನ್ ಕಲಿಕಾ ವೇದಿಕೆಯಾದ 'ಬ್ರೈನ್ಲಿ' ಸಂಸ್ಥೆಯು ರಾಜೇಶ್ ಬೈಸಾನಿ ಅವರನ್ನು ಮುಖ್ಯ ಉತ್ಪನ್ನ ಅಧಿಕಾರಿ (ಚೀಫ್ ಪ್ರಾಡಕ್ಟ್ ಆಫಿಸರ್ -ಸಿಪಿಒ) ಆಗಿ ನೇಮಕ ಮಾಡಿದೆ. 

ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಕಲಿಕೆಗೆ ಅನುಕೂಲವಾಗುವಂತೆ ಮತ್ತುಷ್ಟು ಹೊಸ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ರಾಜೇಶ್ ಪ್ರಮುಖ ಪಾತ್ರ ವಹಿಸಲಿದ್ದಾರೆ. 

ರಾಜೇಶ್ ಅವರಿಗೆ 15 ವರ್ಷಗಳ ಅನುಭವವಿದ್ದು, ವಿವಿಧ ಹುದ್ದೆಗಳಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಗೂಗಲ್, ಬುಕ್ ಮೈ ಶೋ, ರೆಡ್ ಬಸ್, ಝೂಮ್ ಕಾರ್, ಫ್ರೀಚಾರ್ಜ್ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 

"ಕಳೆದ ಒಂದೂವರೆ ದಶಕದಲ್ಲಿ ನವೀನ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿವಲ್ಲಿ ಶ್ರಮಿಸಿದ್ದೇನೆ. ದೈನಂದಿನ ಜೀವನ ಮತ್ತು ಜನರು ಎದುರಿಸುವ ಸಮಸ್ಯೆಗಳ ಪರಿಹಾರಕ್ಕೆ ತಂತ್ರಜ್ಞಾನದ ನೆರವು ಬಹಳ ಮುಖ್ಯ ಎನ್ನುವುದು ನನ್ನ ಅಭಿಪ್ರಾಯ. ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಉತ್ಪನ್ನಗಳ ಅಭಿವೃದ್ದಿ ನನ್ನ ಪ್ರಮುಖ ಗುರಿಯಾಗಿದೆ" ಎಂದು ರಾಜೇಶ್ ಬೈಸಾನಿ ಹೇಳಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com