2.05 ಲಕ್ಷ ಟಿಕೆಟ್ ಮಾರಾಟದಿಂದ ರೈಲ್ವೆಗೆ 76 ಕೋಟಿ ರೂಪಾಯಿ ಗಳಿಕೆ!

2.05 ಲಕ್ಷ ಟಿಕೆಟ್ ಮಾರಾಟದಿಂದ ರೈಲ್ವೆ 76 ಕೋಟಿ ರೂಪಾಯಿ ಗಳಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 2.05 ಲಕ್ಷ ಟಿಕೆಟ್ ಮಾರಾಟದಿಂದ ರೈಲ್ವೆ 76 ಕೋಟಿ ರೂಪಾಯಿ ಗಳಿಸಿದೆ. 

30 ವಿಶೇಷ ರಾಜಧಾನಿ ಎಕ್ಸ್ ಪ್ರೆಸ್ ಗೆ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಕಲ್ಪಿಸಿರುವ ರೈಲ್ವೆ ಇಲಾಖೆ ಈ ವರೆಗೂ 2.05 ಲಕ್ಷ ಟಿಕೆಟ್ ಮಾರಾಟ ಮಾಡಿದ್ದು 76.22 ಕೋಟಿ ರೂಪಾಯಿ ಗಳಿಸಿದೆ. 

ಮೇ.12 ರಿಂದ ಟಿಕೆಟ್ ಬುಕಿಂಗ್ ನ್ನು ಪ್ರಾರಂಭಿಸಲಾಗಿತ್ತು. ಒಂದು ವಾರದ ಅವಧಿಯಲ್ಲಿ 3.08 ಲಕ್ಷ ಪ್ಯಾಸೆಂಜರ್ ಟಿಕೆಟ್ ಗಳು ಮಾರಾಟವಾಗಿದೆ. ಮೇ.18 ರಂದು ಒಂದೇ ದಿನ 26,839 ಪ್ರಯಾಣಿಕರು ವಿಶೇಷ ರಾಜಧಾನಿ ರೈಲಿನಲ್ಲಿ ಸಂಚರಿಸಲಿದ್ದಾರೆ. 

ವಿಶೇಷ ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳ ಹೊರತಾಗಿ ರೈಲ್ವೆ ಇಲಾಖೆ ಶ್ರಮಿಕ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com