ಕನ್ನಡಪ್ರಭ ಡಾಟ್ ಕಾಮ್ ಒಳಗೊಂಡ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ವೆಬ್ ಸೈಟ್ ಓದುಗರ ಸಂಖ್ಯೆ ಶೇ.56ರಷ್ಟು ಹೆಚ್ಚಳ

ಕನ್ನಡ ಕನ್ನಡಪ್ರಭ ಡಾಟ್ ಕಾಮ್ ಒಳಗೊಂಡ 'ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ಸಮೂಹದ ವೆಬ್ ಸೈಟ್ ಗಳ ಓದುಗರ ಸಂಖ್ಯೆ ಶೇ.56ರಷ್ಟು ಹೆಚ್ಚಳವಾಗಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ವೆಬ್ ಸೈಟ್
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ವೆಬ್ ಸೈಟ್

ಬೆಂಗಳೂರು: ಕನ್ನಡ ಕನ್ನಡಪ್ರಭ ಡಾಟ್ ಕಾಮ್ ಒಳಗೊಂಡ 'ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ಸಮೂಹದ ವೆಬ್ ಸೈಟ್ ಗಳ ಓದುಗರ ಸಂಖ್ಯೆ ಶೇ.56ರಷ್ಟು ಹೆಚ್ಚಳವಾಗಿದೆ.

ಹೌದು...ಕೇವಲ 3 ತಿಂಗಳ ಅವಧಿಯಲ್ಲಿ ನಿಮ್ಮ ನೆಚ್ಚಿನ ಕನ್ನಡ ಕನ್ನಡಪ್ರಭ ಡಾಟ್ ಕಾಮ್ ಒಳಗೊಂಡಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ ವೆಬ್ ಸೈಟ್ ಗಳನ್ನು ಮೊಬೈಲ್ ನಲ್ಲಿ ಓದುವವರ ಸಂಖ್ಯೆ ಶೇ.56ರಷ್ಟು ಹೆಚ್ಚಳವಾಗಿದೆ.

ತಾಜಾ, ನಿಖರ, ಸ್ಪಷ್ಟ ಮತ್ತು ನಿಷ್ಟುರ ಸುದ್ದಿಗಳ ನೀಡಿಕೆಯಲ್ಲಿ ಸದಾ ಅಗ್ರ ಸ್ಥಾನದಲ್ಲಿ ನಿಲ್ಲುವ 'ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ಸಮೂಹ ವೆಬ್ ಸೈಟ್ ಗಳು ಡಿಜಿಟಲ್ ಪ್ಲಾಟ್ ಫಾರ್ಮ್ ನ ಎಲ್ಲ ವಿಭಾಗದ ಓದುಗರ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಕೇವಲ ಮೂರು ತಿಂಗಳ ಅವಧಿಯಲ್ಲಿ  ಓದುಗರ ಸಂಖ್ಯೆ ಶೇ.56ರಷ್ಟು ಏರಿಕೆಯಾಗಿದೆ. 

'ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ಸಮೂಹದ ವೆಬ್ ಸೈಟ್ ಗಳಾದ kannadaprabha.com, Newindianexpress.com, dinamani.com, samakalikamalayalam.com, cinemaexpress.com, indulgexpress.com ಮತ್ತು edexlive.com ಗಳ ಸುದ್ದಿಗಳು ಡೆಸ್ಕ್ ಟಾಪ್ ಕಂಪ್ಯೂಟರ್, ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳಲ್ಲಿಯೂ ಲಭ್ಯವಿದೆ. 

ಡಿಜಿಟಲ್ ಕ್ರಾಂತಿಯ ಈ ಸಮಯದಲ್ಲಿ ಎಲ್ಲವೂ ನಮ್ಮ ಕೈ ಬೆರಳುಗಳ ತುದಿಯಲ್ಲೇ ದೊರೆಯುತ್ತವೆ. ಹೀಗಾಗಿ ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ಹೆಲೋ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಎಲ್ಲ ವೆಬ್ ಸೈಟ್ ಗಳ ಖಾತೆಗಳಿದೆ. ಹೀಗಾಗಿ ಇಂಟರ್ನೆಟ್ ಆಧಾರಿತ ಓದುಗರ ಸಂಖ್ಯೆಯಲ್ಲಿ ನಮ್ಮ ಗ್ರೂಪ್ ವೆಬ್ ಸೈಟ್ ಗಳ ಓದುಗರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

2019ರ ಅಕ್ಟೋಬರ್ ನಿಂದ ಡಿಸೆಂಬರ್ ವೇಳೆಗೆ ನಮ್ಮ ಗ್ರೂಪ್ ವೆಬ್ ಸೈಟ್ ಗಳ ಓದುಗರ ಸಂಖ್ಯೆಯಲ್ಲಿ ಶೇ. 56ರಷ್ಟು ಅಂದರೆ 1 ಕೋಟಿ 19 ಲಕ್ಷ ಮೀರಿದೆ. 

ಅಂಕಿ ಅಂಶಗಳ ಮೂಲ: ಮೊಬೈಲ್ ಮೇಟ್ರಿಕ್ಸ್ (ಇಂಡಿಯಾ) ಮತ್ತು ಕಾಮ್‌ಸ್ಕೋರ್ ಡೇಟಾ ಗಳಿಂದ ಪಡೆದ ಮಾಹಿತಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com